

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ವೈಭವದ ಕೊನೇ ದಿನವಾದ ಜಂಬೂಸವಾರಿ ಈ ಬಾರಿ ಸರಳವಾಗಿ ನಡೆಯಿತು. ಕರೊನಾ ಹಿನ್ನೆಲೆಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಈ ಬಾರಿ ಜಂಬೂ ಸವಾರಿ 20 ನಿಮಿಷ ಮಾತ್ರ ನಡೆದಿದ್ದು, ಬಲರಾಮ ದ್ವಾರದ ಬಳಿ ಸಂಪನ್ನಗೊಂಡಿತು. ಅಭಿಮನ್ಯು ಆನೆ ಅಂಬಾರಿಯನ್ನು ಹೊತ್ತು ಸಾಗಿದ. ವಿವಿಧ ಕಲಾ ತಂಡಗಳು, ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಥ್ ನೀಡಿದವು.
ಜಂಬೂಸವಾರಿ ಪ್ರಾರಂಭಕ್ಕೂ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ನಾಡಿನ ಜನರಿಗೆ ವಿಜಯದಶಮಿ ಹಬ್ಬದ ಶುಭಾಶಯ ಕೋರಿದರು.