ಮತ್ತೊಂದು ದಾಖಲೆ ಬರೆದ ಜೈ ಭೀಮ್​ ಚಿತ್ರ: ಟೆಲಿವಿಷನ್​ ಪ್ರೀಮಿಯರ್​ನಲ್ಲಿ ಅತ್ಯಧಿಕ ಟಿಆರ್​ಪಿ

jaibhim
Published on

ಚೆನ್ನೈ: ವಿಶ್ವದಾದ್ಯಂತ ಹೆಚ್ಚು ಪ್ರಶಂಸೆಗೆ ಪಾತ್ರವಾಗಿದ್ದಲ್ಲದೆ, ಹಲವು ದಾಖಲೆಗಳನ್ನು ಬರೆದಿರುವ ನಟ ಸೂರ್ಯ ಅಭಿನಯದ ಜೈ ಭೀಮ್​ ಚಿತ್ರ ಇದೀಗ ಮತ್ತೊಂದು ದಾಖಲೆಯನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ. ಈ ಚಿತ್ರವು ಅತ್ಯಧಿಕ ಟೆಲಿವಿಷನ್​ ರೇಟಿಂಗ್​ ಪಾಯಿಂಟ್ (ಟಿಆರ್​ಪಿ) ಅನ್ನು ಪಡೆದುಕೊಂಡಿದ್ದು, ಇದು ಕಲೈಂಜರ್ ಟಿವಿಯ ಇತ್ತೀಚಿನ ವರ್ಷದ ಅತ್ಯಧಿಕ ರೇಟಿಂಗ್​ ಎಂದು ಹೇಳಲಾಗಿದೆ.

ಜೈ ಭೀಮ್​ ಚಿತ್ರವು ವರ್ಲ್ಡ್​ ಟೆಲಿವಿಷನ್​ ಪ್ರೀಮಿಯರ್​ನಲ್ಲಿ 4945.54 ಇಪ್ರೆಷೆನ್ಸ್​ (ನಗರ ಮತ್ತು ಗ್ರಾಮೀಣ)ನೊಂದಿಗೆ 6.15 ಟೆಲಿವಿಷನ್​ ರೇಟಿಂಗ್​ ಪಡೆದುಕೊಂಡಿದೆ.

ಈ ಚಿತ್ರವನ್ನು ಟಿಜೆ ಜ್ಞಾನವೇಲ್ ನಿರ್ದೇಶನ ಮಾಡಿದ್ದು, 2021ರ ನವೆಂಬರ್​ 2ರಂದು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತು. ಸುಮಾರು ದಿನಗಳ ಬಳಿಕ 2022ರ ಜನವರಿ 15ರಂದು ಸಂಜೆ 6.30ಕ್ಕೆ ಕಲೈಂಜರ್ ಟಿವಿಯಲ್ಲಿ ಜೈ ಭೀಮ್​ ಚಿತ್ರ ಪ್ರೀಮಿಯರ್​ ಆಗಿದೆ. ಅಮೇಜಾನ್​ ಪ್ರೈಮ್​ ಹೊರತಾಗಿಯೂ ಹೊರತಾಗಿಯೂ ಚಿತ್ರ ಟೆಲಿವಿಷನ್​ನಲ್ಲಿ ಇಷ್ಟೊಂದು ಪ್ರಮಾಣದ ರೇಟಿಂಗ್​ ಗಳಿಸಿರುವುದು ಹೊಸ ದಾಖಲೆಯಾಗಿದೆ.

ಜೈ ಭೀಮ್​ ಚಿತ್ರ ಸಾಕಷ್ಟು ಮನ್ನಣೆ ಗಳಿಸಿದೆ. ಐಎಂಡಿಬಿ ರೇಟಿಂಗ್​ನಲ್ಲಿ ಮೊದಲ ಸ್ಥಾನ ಗಳಿಸಿರುವುದಲ್ಲದೆ, ಆಸ್ಕರ್​ ಅಕಾಡೆಮಿ ಅವಾರ್ಡ್ಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಚಿತ್ರ ಕಾಣಿಸಿಕೊಂಡಿದೆ. ಅಲ್ಲದೆ, ಆಸ್ಕರ್​ ಪ್ರಶಸ್ತಿಯ ಸುತ್ತಿಗೂ ಈ ಚಿತ್ರ ಆಯ್ಕೆಯಾಗಿದೆ. ಇದಿಷ್ಟೇ ಇಲ್ಲದೆ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳು ಕೂಡ ಈ ಚಿತ್ರಕ್ಕೆ ಒಲಿದು ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net