

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಹಿಂದಿ ಜತೆಗೆ ದಕ್ಷಿಣ ಚಿತ್ರರಂಗದಲ್ಲೂ ಸದ್ಯ ಬಿಜಿಯಾಗಿದ್ದಾರೆ. ತೆಲುಗಿನ ‘ದೇವರ’ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾದ ಬಳಿಕ ನಟಿಗೆ ತೆಲುಗು ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ರಾಮಚರಣ್ ನಟನೆಯ ‘ಪೆದ್ದಿ’ಯಲ್ಲಿ ಅಭಿನಯಿಸುತ್ತಿದ್ದು, ಇದರ ಬಳಿಕ ಅಲ್ಲು ಅರ್ಜುನ್ ಹಾಗೂ ಅಟ್ಲೀ ಕಾಂಬಿನೇಷನ್ ಸಿನಿಮಾದಲ್ಲೂ ಜಾಹ್ನವಿ ಇರಲಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಟಿಯು ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ‘ದೇವರ’ ಚಿತ್ರಕ್ಕೆ ಜಾಹ್ನವಿ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಪಡೆದಿದ್ದರು. ಕೆಲವೇ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಕ್ಕೆ 5 ಕೋಟಿ ರೂ. ಪಡೆದಿದ್ದ ನಟಿ, ‘ಪೆದ್ದಿ’ ಹಾಗೂ ಅಲ್ಲು ಅರ್ಜುನ್ ಚಿತ್ರದಲ್ಲಿ ಪಾತ್ರವು ಮುಖ್ಯವಾಗಿರಲಿದೆ. ಆ ಕಾರಣಕ್ಕಾಗಿ ಸಂಭಾವನೆ ಹೆಚ್ಚಿಸಿಕೊಂಡಿದ್ದು, ‘ಪೆದ್ದಿ’ಗೆ 6 ಕೋಟಿ ರೂ.ಕೇಳಿದ್ದಾರೆ. ಹಾಗೆಯೇ ಅಲ್ಲು ಅರ್ಜುನ್ ಚಿತ್ರಕ್ಕೆ ಜಾಹ್ನವಿ ಆಯ್ಕೆಯಾಗುವ ಸಾಧ್ಯತೆಯಿದ್ದು, ಈ ಸಿನಿಮಾಕ್ಕೆ 7 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ. ಇದಕ್ಕೆ ಚಿತ್ರತಂಡ ಕೂಡ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ‘ಪುಷ್ಪ 2’ ಚಿತ್ರದ ‘ಕಿಸಕ್’ ನೃತ್ಯಕ್ಕೆ ಸಿಕ್ಕ ಉತ್ತಮ ರೆಸ್ಪಾನ್ಸ್ ಬಳಿಕ ನಟಿ ಶ್ರೀಲೀಲಾ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದರು. ಇದೀಗ ಅದೇ ಹಾದಿಯಲ್ಲಿ ಜಾಹ್ನವಿ ಕಪೂರ್ ಸಾಗಿದ್ದಾರೆ. ಹಿಂದಿಯ ‘ಪರಮ್‌ಸುಂದರಿ’, ‘ಸನ್ನಿ ಸಂಸ್ಕಾರಿ ಕಿ ತುಳಸೀ ಕುಮಾರಿ’ ಜಾಹ್ನವಿ ನಟನೆಯ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. -ಏಜೆನ್ಸೀಸ್