

ಬೆಂಗಳೂರು: ಈವರೆಗೆ ಸೆಂಟಿಮೆಂಟ್ ಫ್ಯಾಮಿಲಿ ಎಂಟರ್ಟೈನರ್ ಚಿತ್ರಗಳನ್ನೇ ಮಾಡಿಕೊಂಡು ಬಂದಿದ್ದ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ ಮಾಸ್ ಎಂಟರ್ಟೈನರ್ ಚಿತ್ರ ‘ಜಗ್ಗಿ ಜಗನ್ನಾಥ್’ ಚಿತ್ರಮಂದಿರದತ್ತ ದಾಪುಗಾಲಿಟ್ಟಿದೆ. ಅಂದರೆ ಶುಕ್ರವಾರ (ಫೆ. 28)ಕ್ಕೆ ಬಿಡುಗಡೆ ಆಗಿದ್ದು, ಲಿಖಿತ್ರಾಜ್ ನಾಯಕನಾಗಿ ನಟಿಸುವುದರ ಜತೆಗೆ ನಿರ್ವಪಕರಾಗಿಯೂ ಬಂಡವಾಳ ಹೂಡಿದ್ದಾರೆ.
ಬಹುವರ್ಷಗಳ ಬಳಿಕ ಮತ್ತೆ ತೆರೆಮೇಲೆ ನಾಯಕಿಯಾಗಿ ‘ದುನಿಯಾ’ ರಶ್ಮಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಮನುಷ್ಯ ಅಘೋರಿಯಾಗಿ ಬದಲಾಗುವ ಕಥೆಯೇ ‘ಜಗ್ಗಿ ಜಗನ್ನಾಥ್’. ಇದು ಆಕ್ಷನ್ ಕಥಾನಕ ಹೊಂದಿರುವ ಚಿತ್ರವಾಗಿರುವುದರಿಂದ ಚಿತ್ರಕ್ಕೆ ‘ಜಗ್ಗಿ ಜಗನ್ನಾಥ್’ ಟೈಟಲ್ ಇಟ್ಟಿದ್ದೇವೆ. ಅಷ್ಟೇ ಮುದ್ದಾದ ಪ್ರೇಮ್ಹಾನಿಯು ಸಿನಿಮಾದಲ್ಲಿದೆ’ ಎಂದರು ನಿರ್ದೇಶಕ ಸಾಯಿಪ್ರಕಾಶ್.
‘ಒಬ್ಬ ಪೇಪರ್ ಹಾಕುವ ಹುಡುಗ ಹೇಗೆ ಅಘೊರಿಯಾಗುತ್ತಾನೆ. ಆತನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ಹೇಳುವ ಚಿತ್ರವಿದು’ ಎನ್ನುವ ಲಿಖಿತ್, ಸಿನಿಮಾದಲ್ಲಿ ಅಘೋರಿಗಳ ಜೀವನಶೈಲಿಯನ್ನೂ ತೋರಿಸಿದ್ದಾರಂತೆ. ಇನ್ನು ನಾಯಕಿ ರಶ್ಮಿ ಅವರದ್ದಿಲ್ಲಿ, ಮುಸ್ಲಿಂ ಯುವತಿಯ ಪಾತ್ರ. ಇನ್ನುಳಿದಂತೆ ರೇಣುಕುಮಾರ್ ಛಾಯಾಗ್ರಹಣ ಮಾಡಿದ್ದಾರೆ.