ಮಂಜುನಾಥನ ರೆಕಾರ್ಡ್ ಮುರಿದ ಜಗ್ಗೇಶ್ ... ಕೆಲಸವಿಲ್ಲದೆ 14 ಗಂಟೆ ನಿದ್ದೆ ಮಾಡಿದ ‘ನವರಸ ನಾಯಕ’

Jaggesh Final
Published on

ಜಗ್ಗೇಶ್ ಅವರ ಚಿತ್ರಜೀವನದ ಬಹಳ ಮುಖ್ಯವಾದ ಚಿತ್ರ ಎಂದರೆ, ಅದು ‘ಎದ್ದೇಳು ಮಂಜುನಾಥ’. ಗುರುಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಜಗ್ಗೇಶ್ ಅವರು ಪರಮ ಸೋಮಾರಿಯಾಗಿ ನಟಿಸಿದ್ದರು. ಅವರ ಈ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಜಗ್ಗೇಶ್ ಅವರು ಮಂಜುನಾಥನ ದಾಖಲೆಯನ್ನು ರಿಯಲ್ ಲೈಫ್​ನಲ್ಲಿ ಮುರಿದಿದ್ದಾರೆ.

ಮಂಗಳವಾರ ಬೆಳಿಗ್ಗೆ ಟ್ವೀಟ್ ಮಾಡಿರುವ ಅವರು, 14 ಗಂಟೆಗಳ ಕಾಲ ನಿದ್ದೆ ಮಾಡುವ ಮೂಲಕ ‘ಎದ್ದೇಳು ಮಂಜುನಾಥ’ನ ರೆಕಾರ್ಡ್ ಮುರಿದಿದ್ದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

‘ಮಂಜುನಾಥನ ರೆಕಾರ್ಡ್ ಬ್ರೇಕ್. 14 ಗಂಟೆ ನಿದ್ರಿಸಿ ಇಂದು ಮುರಿದೆ. ಕಾರಣ ಮಾಡಲು ಕಾಯಕವಿಲ್ಲ. ಅದೇ ಪುಸ್ತಕ, ಅದೇ ನೆಟ್‌ಫ್ಲಿಕ್ಸ್, ಅದೇ ಊಟ, ಅದೇ ವ್ಯಾಯಾಮದ ಪುನರಾವರ್ತನೆ ತಪ್ಪಿಸಲು. ನನ್ನ ಬೇಜಾರು ನಾನೇ ಕಳೆಯುವ ತಂತ್ರ. ತಪ್ಪು, ಆದರೂ ವಿಧಿಯಿಲ್ಲ. ಸ್ಟೇ ಹೋಮ್’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ. ಹಾಗೆಯೇ ರಾಯರ ಬೃಂದಾವನದ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net