ಮನೆಗೊಬ್ಬ ಮಂಜುನಾಥ; ಚಿತ್ರವಾಯ್ತು ಜಗ್ಗೇಶ್ ಚಿತ್ರದ ಹಾಡು..

Manegobba Manjunatha
ರವಿರಾಮ್, ಕೇಶವಮೂರ್ತಿ
Published on

ಬೆಂಗಳೂರು: ‘ನವರಸ ನಾಯಕ’ ಜಗ್ಗೇಶ್ ನಟನೆಯ ‘ಎದ್ದೇಳು ಮಂಜುನಾಥ’ ಚಿತ್ರದಲ್ಲಿ ‘ಮನೆಗೊಬ್ಬ ಮಂಜುನಾಥ ಮೇಡ್ ಇನ್ ಇಂಡಿಯಾ ...’ ಎಂಬ ಜನಪ್ರಿಯ ಹಾಡು ನೆನಪಿರಬಹುದು. ಇದೀಗ ಆ ಹಾಡನ್ನೇ ಶೀರ್ಷಿಕೆ ಮಾಡಿ ‘ಮನೆಗೊಬ್ಬ ಮಂಜುನಾಥ’ ಸಿನಿಮಾ ಮಾಡಿದ್ದಾರೆ ನಿರ್ದೇಶಕ ರವಿರಾಮ್.

ವಂಶಿ, ನಾಣಿ, ಸೀನ ಎಂಬ ಮೂವರು ಸೋಮಾರಿ ಯುವಕರು ದಿಢೀರ್ ಶ್ರೀಮಂತರಾಗಬೇಕೆಂದು ಯಾವೆಲ್ಲ ದಾರಿ ಹಿಡಿಯುತ್ತಾರೆ? ಕೊನೆಗೆ ಹೇಗೆ ಬದಲಾವಣೆ ಕಾಣುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ನಾಣಿ ಪಾತ್ರದಲ್ಲಿ ನಟಿಸುವುದರ ಜತೆಗೆ ನಿರ್ಮಾಣದಲ್ಲಿಯೂ ಕೈ ಜೋಡಿಸಿದ್ದಾರೆ ಕೇಶವ್. ಪವನ್, ಕಾರ್ತಿಕ್ ಸಹ ಚಿತ್ರದಲ್ಲಿದ್ದು, ‘ಉಗ್ರಂ’ ರೆಡ್ಡಿ ಪ್ರಮುಖ ಪಾತ್ರದಲ್ಲಿದ್ದಾರೆ.

ಸದ್ಯ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡ ತಂಡ ‘ಬಿಡುಗಡೆಗೆ ನಾವಿನ್ನು ರೆಡಿ’ ಎಂದು ಹೇಳಲು ಇತ್ತೀಚೆಗಷ್ಟೇ ಮಾಧ್ಯಮದ ಮುಂದೆ ಬಂದಿತ್ತು. ಬಿ.ಎಲ್ ಬಾಬು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ದತ್ತಣ್ಣ, ಕೃಷ್ಣೋಜಿರಾವ್, ಮಹೇಂದ್ರ ಮನೋತ್ ಚಿತ್ರದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net