ಹೌದು, ಥಿಯೇಟರ್ಗಳು ಹೊಸ ನಿಯಮವನ್ನು ಮೀರದಂತೆ ನೋಡಿಕೊಳ್ಳುವ ದಳ ಮತ್ತು ಅದರ ಪ್ರಯಾಣ ವೆಚ್ಚ, ಸಿಆರ್‌ಪಿಎಫ್ ಯೋಧರ ಪ್ರಯಾಣ ಹಾಗೂ ದಿನದ ಭತ್ಯೆ, ಜತೆಗೆ ಹೆಚ್ಚುವರಿ ಪೊಲೀಸರ ನಿಯೋಜನೆ ಭತ್ಯೆ ಇತರೆಗಳನ್ನು ಲೆಕ್ಕ ಹಾಕಿದರೆ ಒಂದು ದಿನಕ್ಕೆ ಮೂರು ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚಾಗುತ್ತದೆ ಎನ್ನಲಾಗಿದೆ. ಟಿಕೆಟ್ ದರ ಇಳಿಕೆ ನಿಯಮವನ್ನು ಜಗನ್ ಸರ್ಕಾರ ಮತ್ತೆ ಪರಿಶೀಲಿಸುವ ಮೊದಲೇ 'ಭೀಮ್ಲಾ ನಾಯಕ್' ಚಿತ್ರ ರಿಲೀಸ್ ಆಗಿದ್ದು, ಇದರಿಂದ, ಆಂಧ್ರದಲ್ಲಿ ಮತ್ತೆ 'ಪವನ್ v/s ಜಗನ್ ಸರ್ಕಾರ' ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು, ಇದರಿಂದ ಪವನ್ ಅಭಿಮಾನಿಗಳಿಗಂತೂ ಎರಡನೇ ಬಾರಿ ಅವರ ನೆಚ್ಚಿನ ನಟನ ಸಿನಿಮಾ ನೋಡೋಕೆ ಆಗದೆ ನಿರಾಸೆ ಎದುರಾಗಿದೆ.