

ಮಲಯಾಳಂ ಚಿತ್ರನಟ ಮೋಹನ್ ಲಾಲ್ ಮತ್ತು ಹಾಲಿವುಡ್ ನಟ ಜಾಕಿ ಚಾನ್ ಜತೆಯಾಗಿ ಸಿನಿಮಾ ಮಾಡಲಿದ್ದಾರೆ. ಈ ಸುದ್ದಿ ಈಗಾಗಲೇ ಕೇಳಿಬಂದಿದ್ದರೂ ಮಾಲಿವುಡ್ಗೆ ಜಾಕಿ ಚಾನ್ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ಸಿನಿಪ್ರಿಯರು ನಂಬಲು ಸಾಧ್ಯ ಆಗಿರಲಿಲ್ಲ. ಆದರೆ ಇದೀಗ ನಿಜವಾಗಿದೆ. ಜಾಕಿ ಚಾನ್-ಮೋಹನ್ ಲಾಲ್ ಒಟ್ಟಾಗಿ ಮಲಯಾಳಂ ಚಿತ್ರ ‘ನಾಯರ್-ಸ್ಯಾನ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜಾಕಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ. ಚಿತ್ರಕ್ಕೆ ಮಾಲಿವುಡ್ನ ಖ್ಯಾತ ನಿರ್ದೇಶಕ ಆಲ್ಬರ್ಟ್ ಆಂಟೋನಿ ಆಕ್ಷನ್-ಕಟ್ ಹೇಳಲಿದ್ದಾರೆ. ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಅಯ್ಯಪ್ಪನ್ ಪಿಳ್ಳೆ ೖ ಮಾಧವನ್ ನಾಯರ್ ಕುರಿತ ಚಿತ್ರವಿದು ಇವರನ್ನು ಜಪಾನಿಯರು ‘ನಾಯರ್-ಸ್ಯಾನ್’ ಎಂದು ಕರೆಯುತ್ತಿದ್ದರಂತೆ. ಹೀಗಾಗಿ ಚಿತ್ರಕ್ಕೆ ಅದೇ ಹೆಸರಿಡಲಾಗಿದೆ ಎನ್ನಲಾಗಿದೆ. ವರ್ಷಾಂತ್ಯದಲ್ಲಿ ಸೆಟ್ಟೇರುವ ಈ ಸಾಹಸಮಯ ಚಿತ್ರದಲ್ಲಿ ಮೋಹನ್ ಲಾಲ್-ಜಾಕಿ ಚಾನ್ ಜತೆ ಆಗಲಿರುವುದು ಮಾಲಿವುಡ್ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಸದ್ಯ ನಟ ಮೋಹನ್ ಲಾಲ್ ‘ಮರಕ್ಕರ್ ಅರಬಿಕಾಡಲಿಂಟೆ ಸಿಂಹಮ್ ಚಿತ್ರದಲ್ಲಿ ಬಿಜಿ ಆಗಿದ್ದಾರೆ. ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ ಈ ಚಿತ್ರದ ನಾಯಕಿ. -ಏಜೆನ್ಸೀಸ್