

ಬೆಂಗಳೂರು: ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹಾಯಕ ಮತ್ತು ಸಹನಿರ್ದೇಶಕರಾಗಿ ಕೆಲವು ಸಿನಿಮಾಗೆ ಕೆಲಸ ಮಾಡಿರುವ ಹರೀಶ್ ಟಿ, ಇದೀಗ ಸ್ವತಂತ್ರ ನಿರ್ದೇಶಕರಾಗುವುದಕ್ಕೆ ಸಜ್ಜಾಗಿದ್ದಾರೆ.
ಹರೀಶ್ ಅವರ ಮೊದಲ ಚಿತ್ರಕ್ಕೆ ‘ಅಫಿಶಿಯಲ್’ ಎಂಬ ಹೆಸರನ್ನು ಇಡಲಾಗಿದ್ದು ಡಿಸೆಂಬರ್ 1ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಈ ‘ಅಫಿಶಿಯಲ್’ ಚಿತ್ರವು ಒಂದು ಎಮೋಷನಲ್ ಲವ್ಸ್ಟೋರಿಯಾಗಿದ್ದು, ನಾಯಕಿ ಒಂದು ಸಮಸ್ಯೆಯಲ್ಲಿ ಸಿಕ್ಕಿರುತ್ತಾಳಂತೆ. ಆಕೆಯ ಸಮಸ್ಯೆಗೆ ನಾಯಕ ಹೇಗೆಲ್ಲ ಸ್ಪಂದಿಸಿ, ಆಕೆಯನ್ನು ಅದರಿಂದ ಹೊರತರುತ್ತಾನೆ ಎಂಬುದು ಚಿತ್ರಕಥೆಯಂತೆ.
ಈ ಚಿತ್ರದ ಮೂಲಕ ರಕ್ಷಿತ್ ಭಾರ್ಗವ್ ನಾಯಕನಾಗಿ ನಟಿಸಿದರೆ, ನಾಯಕಿಯ ಹುಡುಕಾಟ ಇನ್ನೂ ನಡೆದಿದೆಯಂತೆ. ಮಿಕ್ಕಂತೆ ಪೋಷಕ ಪಾತ್ರಗಳಲ್ಲಿ ಸಾಕಷ್ಟು ಹೊಸಬರು ನಟಿಸುತ್ತಿದ್ದು, ಕಲಾವಿದರ ಆಯ್ಕೆ ನಡೆಯುತ್ತಿದೆ. ಈ ಚಿತ್ರವನ್ನು ಬೆಸ್ಟ್ ಮೂವೀಸ್ ಸಂಸ್ಥೆಯಡಿ ಒಂದಿಷ್ಟು ಸ್ನೇಹಿತರು ಸೇರಿ ನಿರ್ವಿುಸುತ್ತಿದ್ದಾರೆ.