ಹೋಲಿಕೆಗಳಿಗಿಂತ ನ್ಯಾಯ ಸಲ್ಲಿಸುವುದು ಮುಖ್ಯ; ಐರನ್​ ಲೇಡಿ ನಿತ್ಯಾ ಅಭಿಮತ

Ullasa- nitya
Published on

ಬೆಂಗಳೂರು: ನಿತ್ಯಾ ಮೆನನ್ ಇದೇ ಮೊದಲ ಬಾರಿಗೆ ‘ಬ್ರಿಥ್ 2’ ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದು, ಆ ಸರಣಿ ಈಗಾಗಲೇ ಅಮೇಜಾನ್​ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಮಧ್ಯೆ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಬಯೋಪಿಕ್​ನಲ್ಲೂ ನಿತ್ಯಾ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ‘ದಿ ಐರನ್ ಲೇಡಿ’ ಎಂಬ ಹೆಸರು ಇಡಲಾಗಿದೆ.

ಈಗಾಗಲೇ ಜಯಲಲಿತಾ ಕುರಿತಾಗಿ ‘ತಲೈವಿ’ ಎಂಬ ಚಿತ್ರ ನಿರ್ವಣವಾಗಿದ್ದು, ಅದರಲ್ಲಿ ಜಯಲಲಿತಾ ಪಾತ್ರವನ್ನು ಕಂಗನಾ ರಣಾವತ್ ನಿರ್ವಹಿಸಿದ್ದಾರೆ. ಇನ್ನು ‘ಕ್ವೀನ್’ ಎಂಬ ವೆಬ್ ಸೀರೀಸ್​ನಲ್ಲಿ ರಮ್ಯಾ ಕೃಷ್ಣ ನಟಿಸಿದ್ದಾರೆ. ಹೀಗೆ ಈಗಾಗಲೇ ಇಬ್ಬಿಬ್ಬರು ಜಯಲಲಿತಾ ಅವರ ಪಾತ್ರಗಳಲ್ಲಿ ಕಾಣಿಸಿಕೊಂಡಿರುವಾಗ, ಹೋಲಿಕೆಗಳು ಸಹಜ. ಆದರೆ, ನಿತ್ಯಾ ಹೋಲಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವಂತೆ. ‘ನಾವು ಆ ಪಾತ್ರಕ್ಕೆ ಸರಿ ಹೊಂದುತ್ತೇವೋ, ಇಲ್ಲವೋ ಎಂದು ಹೋಲಿಕೆ ಮಾಡುವುದು ಮುಖ್ಯವಲ್ಲ. ಆ ಪಾತ್ರವನ್ನು ಮೂವರು ನಟಿಯರು ಮಾಡಿದ್ದು, ಯಾರು ಎಷ್ಟು ಚೆನ್ನಾಗಿ ಪಾತ್ರ ಮಾಡಿದ್ದಾರೆ ಎನ್ನುವುದು ಹೆಚ್ಚು ಮುಖ್ಯ’ ಎನ್ನುತ್ತಾರೆ ನಿತ್ಯಾ ಮೆನನ್.

ಇನ್ನು ಜಯಲಲಿತಾ ಕುರಿತಾ ಇಷ್ಟೊಂದು ಚಿತ್ರಗಳು ನಿರ್ವಣವಾಗುತ್ತಿರುವ ಬಗ್ಗೆ ನಿತ್ಯಾಗೆ ಭಯವಿಲ್ಲವಂತೆ. ‘ಎಲ್ಲರಿಗೂ ತಮಗೆ ಬೇಕಾದ ಸಿನಿಮಾ ಮಾಡುವ ಸ್ವಾತಂತ್ರ್ಯವಿದೆ. ಎಲ್ಲರೂ ತಮ್ಮ ಚಿತ್ರವನ್ನು ಬಹಳ ಪ್ಯಾಶನ್​ನಿಂದ ಮಾಡುತ್ತಾರೆ. ನಾವು ಸಹ ಅಷ್ಟೇ ಪ್ಯಾಶನ್​ನಿಂದ ಮಾಡಿದ್ದೇವೆ. ನಿರ್ದೇಶಕಿ ಪ್ರಿಯದರ್ಶಿನಿ ಅವರು ಈ ಚಿತ್ರ ಮಾಡುವ ಬಗ್ಗೆ ಹೇಳಿದಾಗ, ನಾನು ಮೊದಲು ಒಪ್ಪಿರಲಿಲ್ಲ. ಆದರೆ, ಅವರ ಆಸಕ್ತಿ ನೋಡಿ, ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ’ ಎನ್ನುತ್ತಾರೆ ನಿತ್ಯಾ ಮೆನನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net