

ಬಾಲಿವುಡ್ ನಟ ಶಾಹಿದ್ ಕಪೂರ್ ಸಹೋದರ ಇಶಾನ್ ಖಟ್ಟರ್ 2017ರಲ್ಲಿ "ಬಿಯಾಂಡ್ ದ ಕ್ಲೌಡ್ಸ್' ಚಿತ್ರದ ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದ್ದು ಗೊತ್ತಿದೆ. ಆ ಬಳಿಕ "ಧಡಕ್', "ಖಾಲಿ ಪೀಲಿ', "ಫೋನ್ ಭೂತ್' ಜತೆಗೆ ಕಳೆದ ವರ್ಷ ತೆರೆಗೆ ಬಂದ "ಪಿಪ್ಪಾ' ಚಿತ್ರಗಳಲ್ಲಿ ನಟಿಸಿದ್ದರು. ಅದರ ನಡುವೆಯೇ 2020ರ "ಎ ಸೂಟಬಲ್ ಬಾಯ್' ಎಂಬ ಮಿನಿ ಸರಣಿಯಲ್ಲಿ ನಟಿಸುವ ಮೂಲಕ ಹಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ಇಶಾನ್ ಇದೀಗ ಮತ್ತೊಂದು ಇಂಗ್ಲೀಷ್ ಸರಣಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ವೆಬ್ಸರಣಿಯ ಹೆಸರು "ದ ಪಫೆರ್ಕ್ಟ್ ಕಪಲ್'. ಸುಸಾನ್ ಬಿಯರ್ ನಿರ್ದೇಶನದ ಈ ಕೆಮ್ ಮಿಸ್ಟರಿ ಡ್ರಾಮಾ ಸರಣಿಯು ಮದುವೆ ಸಮಾರಂಭದಲ್ಲಿ ನಡೆಯುವ ಕೊಲೆ ಸುತ್ತ ಸಾಗುತ್ತದೆ. ಸರಣಿಯಲ್ಲಿ ನಿಕೋಲ್ ಕಿಡ್ಮ್ಯಾನ್, ಲೀವ್ ಶ್ರೀಬರ್, ಡಕೋಟಾ ಫ್ಯಾನಿಂಗ್, ಬಿಲ್ಲಿ ಹೌಸ್ ಅವರಂತಹ ಹೆಸರಾಂತ ಹಾಲಿವುಡ್ ತಾರೆಯರ ಜತೆ ಇಶಾನ್ ತೆರೆ ಹಂಚಿಕೊಂಡಿದ್ದಾರೆ.
ಇಶಾನ್ ಇಲ್ಲಿ ನಾಯಕ ಬಿಲ್ಲಿ ಹೌಸ್ ಗೆಳೆಯ "ಶೂಟರ್ ದಿವಾಲ್' ಪಾತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಈ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ನಲ್ಲಿ ಬೆತ್ತಲೆ ಲುಕ್ನಲ್ಲಿ ಇಶಾನ್ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದೆ. ಇದೇ ಸೆ. 5ರಂದು "ದ ಪೆರ್ಕ್ಟ್ ಕಪಲ್' ಒಟಿಟಿಯಲ್ಲಿ ರಿಲೀಸ್ ಆಗಲಿದೆ. &ಏಜೆನ್ಸೀಸ್