ಕಾಂಟ್ರೋವರ್ಸಿಗಳೇ ಪ್ಲಸ್ ಆಯ್ತಾ? 'ಕರುಪ್ಪು' ಬ್ಯೂಟಿ ತ್ರಿಷಾ ಡಿಮಾಂಡ್ಗೆ ನಿರ್ಮಾಪಕರು ಸುಸ್ತು!
ತಮಿಳು ನಟಿ ತ್ರಿಷಾ ಕೃಷ್ಣನ್
Published on:
Copied
Follow Us
ಚೆನ್ನೈ: ಈ ವರ್ಷ ತಮಿಳು ಸುಂದರಿ ತ್ರಿಷಾ ಕೃಷ್ಣನ್ ಜನಪ್ರಿಯತೆ ಡಬಲ್ ಆಗಿದೆ ಅನ್ನೋದಕ್ಕೆ ಅವರ ಸಂಭಾವನೆ ಬೇಡಿಕೆಯೇ ಸಾಕ್ಷಿ ಎಂಬ ಮಾತುಗಳು ಸದ್ಯ ಕಾಲಿವುಡ್ ಅಂಗಳದಲ್ಲಿ ಸಖತ್ ಚರ್ಚೆಯಾಗುತ್ತಿದೆ.
ಇತ್ತೀಚೆಗಷ್ಟೇ ತಮಿಳು ನಟ ಸೂರ್ಯ ಅಭಿನಯದ 'ಕರುಪ್ಪು' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ತ್ರಿಷಾ, ಅಂತಹ ಯಶಸ್ಸು ಗಳಿಸದೆ ಹೋದರೂ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು. ಇದರೊಟ್ಟಿಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಹೆಸರಿನ ಜೊತೆ ತನ್ನ ಹೆಸರು ಪದೇ ಪದೇ ಕೇಳಿಬಂದಿದ್ದು, ನಟಿಗೆ ಒಂದು ರೀತಿ ಗುಡ್ಲುಕ್ ಆಗಿಯೇ ಬದಲಾಗಿರುವುದು ಮತ್ತೊಂದು ಆಶ್ಚರ್ಯಕರ ಸಂಗತಿ. ಇದರೊಟ್ಟಿಗೆ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ.
ಇದಕ್ಕೋ ಏನೋ, ತ್ರಿಷಾ ತಮ್ಮನ್ನು ಹುಡುಕಿಕೊಂಡು ಬರುತ್ತಿರುವ ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳಲ್ಲಿ ನಟಿಸಲು ದೊಡ್ಡ ಮೊತ್ತದ ಸಂಭಾವನೆಯ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ಸಿನಿ ವರದಿಗಳು ಉಲ್ಲೇಖಿಸಿವೆ. ಸ್ಟಾರ್ ಹೀರೋಯಿನ್ ಅವರ 15 ಕೋಟಿ ರೂ. ಬೇಡಿಕೆಯನ್ನು ಕೇಳಿ ನಿರ್ಮಾಪಕರು ಶಾಕ್ ಆಗಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಸ್ಟಾರ್ ನಟನ ಮುಂದಿನ ಪ್ಯಾನ್ ಇಂಡಿಯಾ ಚಿತ್ರಕ್ಕೆ ತ್ರಿಷಾರನ್ನು ನಾಯಕಿಯಾಗಿ ನಟಿಸುವಂತೆ ನಿರ್ಮಾಣ ಸಂಸ್ಥೆಯೊಂದು ಇತ್ತೀಚೆಗೆ ಅವರನ್ನು ಸಂಪರ್ಕಿಸಿದೆ. ಕಥೆಯನ್ನು ಕೇಳಿದ ಬಳಿಕ 15 ಕೋಟಿ ರೂ. ಸಂಭಾವನೆಯನ್ನು ತ್ರಿಷಾ ಕೇಳಿದ್ದು, ಈ ಮೊತ್ತವನ್ನು 10 ಕೋಟಿ ರೂ.ಗೆ ಇಳಿಸುವ ಪ್ರಯತ್ನದಲ್ಲಿ ನಿರ್ಮಾಪಕರು ತಮ್ಮ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇಲ್ಲಿಯವರೆಗೆ, ಲೇಡಿ ಸೂಪರ್ಸ್ಟಾರ್ ನಯನತಾರಾ ಮಾತ್ರ ತಮಿಳು ಚಿತ್ರರಂಗದಲ್ಲಿ 10 ಕೋಟಿ ರೂ.ಗೂ ಹೆಚ್ಚು ಸಂಭಾವನೆ ಪಡೆದ ನಟಿಯಾಗಿದ್ದಾರೆ. ಈ ವರದಿಗಳು ಅಧಿಕೃತವಾಗಿದ್ದೇ ಆದರೆ, ಆ ಪಟ್ಟಿಯಲ್ಲಿ ನಯನತಾರಾ ಅವರನ್ನು ತ್ರಿಷಾ ಹಿಂದಿಕ್ಕುವಲ್ಲಿ ಅನುಮಾನವೇ ಇಲ್ಲ,(ಏಜೆನ್ಸೀಸ್).