ಕಾಂಗ್ರೆಸ್​ ಸೇರಲು ಮುಂದಾಗಿದ್ದರಾ ನಟಿ ರಾಗಿಣಿ?

Ragini
Published on

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್​ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಕಾಂಗ್ರೆಸ್ ಸೇರುವ ಪ್ರಯತ್ನ ಮಾಡಿದ್ದರಾ?..ಹೀಗೊಂದು ಮಾತು ಈಗ ಬಲ್ಲ ಮೂಲಗಳಿಂದ ಕೇಳಿಬರುತ್ತಿದೆ.

ಕೆಲವು ತಿಂಗಳುಗಳ ಕೆಳಗೆ ನಟಿ ರಾಗಿಣಿ ಕಾಂಗ್ರೆಸ್ನ ಪ್ರಮುಖ ನಾಯಕರೊಬ್ಬರ ಬಳಿ ರಾಜಕೀಯಕ್ಕೆ ಸೇರುವ ಬಗ್ಗೆ ಚರ್ಚೆ ನಡೆಸಿದ್ದರಂತೆ. ನಾನು ಕಾಂಗ್ರೆಸ್ ಸೇರಿದರೆ ಹೇಗೆ ಎಂದು ಪ್ರಶ್ನಿಸಿದ್ದರಂತೆ. ಈ ವಿಚಾರ ಇಂದಿನ ಕಾಂಗ್ರೆಸ್ ಮುಖಂಡರ ಸಭೆಯಲ್ಲಿಯೂ ಚರ್ಚೆಯಾಗಿದೆ.

ಕರೊನಾ ಸಮಸ್ಯೆಗಳು ಮುಗಿದ ಬಳಿಕ ಪಕ್ಷಕ್ಕೆ ಸೇರುವ ಬಗ್ಗೆ ನಿರ್ಧರಿಸಿ ಎಂದು ಆಕೆಗೆ ಸಲಹೆ ನೀಡಿದ್ದಾಗಿ ಇಂದಿನ ಸಭೆಯಲ್ಲಿ ಕಾಂಗ್ರೆಸ್​ ಮುಖಂಡ ವಿವರಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net