

ಬೆಂಗಳೂರು: ಕನ್ನಡದಲ್ಲಿ ಕಂಟೆಂಟ್ ಪ್ರಧಾನ ಸಿನಿಮಾಗಳು ಹೆಚ್ಚು ಬರುತ್ತಿವೆ. ಅಂತೆಯೇ ಅದನ್ನು ಜನರಿಗೆ ತಲುಪಿಸಲು ಚಿತ್ರತಂಡಗಳು ನಾನಾ ಸರ್ಕಸ್ ಮಾಡುತ್ತಿವೆ. ಅದರಲ್ಲಿ ನಾಳೆ ತೆರೆ ಕಾಣುತ್ತಿರುವ ಭರತವರ್ಷ ನಿರ್ದೇಶನದ ‘ಇಂಟರ್ವೆಲ್’ ಸಿನಿಮಾ ತಂಡದ ಪ್ರಯತ್ನ ವಿಭಿನ್ನವಾಗಿದೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗದಿದ್ದರೆ, ದುಡ್ಡು ವಾಪಸ್ ಕೊಡಲು ಚಿತ್ರತಂಡ ನಿರ್ಧರಿಸಿದೆ. ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಕೇಶ್ ಸುಕಿ ಈ ಬಗ್ಗೆ, ‘ನಮ್ಮದು ಕಂಟೆಂಟ್ ಪ್ರಧಾನ ಚಿತ್ರ. ಹಾಸ್ಯ, ಜೀವನ ದೃಷ್ಟಿಕೋನ, ಎಮೋಷನ್, ್ಯಾಮಿಲಿ, ಪ್ರೀತಿ ಎಲ್ಲ ಅಂಶಗಳಿವೆ. 140 ನಿಮಿಷಗಳ ಚಿತ್ರ ಎಲ್ಲಿಯೂ ಬೋರ್ ಆಗದಂತೆ ನೋಡಿಸಿಕೊಂಡು ಹೋಗುತ್ತದೆ. ಹಾಗೂ ನಮ್ಮ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗದಿದ್ದರೆ, ಟಿಕೆಟ್ ಹಣ ವಾಪಸ್ ಕೊಡಲು ಮುಂದಾಗಿದ್ದೇವೆ. ಬುಕ್ ಮಾಡಿರುವ ಟಿಕೆಟ್‌ಅನ್ನು ನಮ್ಮ ಚಿತ್ರತಂಡದ ೆನ್ ನಂಬರ್‌ಗಳಿಗೆ ಕಳುಹಿಸಿದರೆ ಖಂಡಿತ ವಾಪಸ್ ಮಾಡುತ್ತೇವೆ’ ಎಂದು ಘೋಷಿಸುತ್ತಾರೆ.
ಉಪನ್ಯಾಸಕನ ಅನುಭವದ ಸ್ಟೋರಿ: ಸುಕೇಶ್ ಸುಕಿ ಬರೆದಿರುವ ಮೊದಲ ಕಥೆ ಇದು. ಈ ಹಿಂದೆ ಅವರು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ವೃತ್ತಿ ಅನುಭವಗಳನ್ನೇ ಕಥೆಯಾಗಿಸಿದ್ದಾರೆ. ಸಿನಿಮಾ ಮಾಡುವುದೇ ಅವರ ಜೀವನದ ಕೊನೆಯ ಆಸೆಯಾಗಿತ್ತಂತೆ. ಅವರ ಕನಸು ನನಸಾಗಿಸಿಕೊಂಡಿರುವ ಬಗ್ಗೆ, ‘ಇದೊಂದು ಕಾಮಿಡಿ ಜಾನರ್ ಸಿನಿಮಾ. ಜತೆಗೆ ಬದುಕಿನ ಆಳವನ್ನು ತಿಳಿಯುವ ಕಥೆ. 25ರಿಂದ 30 ವರ್ಷದ ವಯಸ್ಸು ಜೀವನದ ಮಧ್ಯಂತರ ಭಾಗ. ಆಗ ಜೀವನದಲ್ಲಿ ಎದುರಿಸುವ ಸವಾಲು, ಸಮಸ್ಯೆಗಳನ್ನೇ ಇಲ್ಲಿ ತೋರಿಸಲಾಗುತ್ತಿದೆ. ಹಾಸ್ಯದಲ್ಲಿ ತೆರೆದುಕೊಳ್ಳುವ ಕಥೆ ಕ್ಲೈಮ್ಯಾಕ್ಸ್‌ನಲ್ಲಿ ಬೇರೆಯದೇ ಹಾದಿ ಹಿಡಿಯುತ್ತದೆ. ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಸುತ್ತಮುತ್ತ 42 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ‘ಜಾಕಿ’ ಚಿತ್ರದಲ್ಲಿ ಅಪ್ಪು ಸರ್ ಮತ್ತು ರಂಗಾಯಣ ರಘು ಅವರ ಕಾಮಿಡಿ ನೋಡಿ ನಾನು ಸಿನಿಮಾ ಮಾಡಬೇಕು ಅಂತ ಅಂದುಕೊಂಡವನು. ಅದೀಗ ಈಡೇರಿದೆ’ ಎಂದು ಹೇಳಿಕೊಳ್ಳುತ್ತಾರೆ.