10.5 ಕೋಟಿಯ ಕಾರ್, 75 ಕೋಟಿಯ ಬಂಗಲೆ: ಮದುವೆ ಸಂಭ್ರಮದಲ್ಲಿರೋ ಅಮೀರ್ ಖಾನ್ ಒಟ್ಟು ಆಸ್ತಿ ಕೇಳಿದ್ರೆ ದಂಗಾಗ್ತೀರಾ! Aamir Khan NetWorth

Aamir Khan NetWorth (ಚಿತ್ರ X)
Aamir Khan NetWorth (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಪ್ರಸಿದ್ಧರಾಗಿರುವ ನಟ ಅಮೀರ್ ಖಾನ್
  • ಚಿತ್ರರಂಗದಲ್ಲಿ ಕೇವಲ ಉತ್ತಮ ಸಿನಿಮಾಗಳಿಗೆ ಮಾತ್ರವಲ್ಲದೆ ಭಾರಿ ಪ್ರಮಾಣದ ಆಸ್ತಿ ಗಳಿಕೆಯಲ್ಲೂ ಮುಂಚೂಣಿಯಲ್ಲಿದ್ದಾರೆ
  • ಪ್ರಸ್ತುತ ಬೆಂಗಳೂರು ಮೂಲದ ಉದ್ಯಮಿ ಗೌರಿ​ ಅವರೊಂದಿಗೆ ಮುಂಬೈನ ಬಾಂದ್ರಾ ನಿವಾಸದಲ್ಲಿ ಸರಳವಾಗಿ ವಿವಾಹ
  • ಅಮೀರ್ ಖಾನ್ ಅವರು ದೇಶ-ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ
Aamir Khan NetWorth: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಪ್ರಸಿದ್ಧರಾಗಿರುವ ನಟ ಅಮೀರ್ ಖಾನ್, ಚಿತ್ರರಂಗದಲ್ಲಿ ಕೇವಲ ಉತ್ತಮ ಸಿನಿಮಾಗಳಿಗೆ ಮಾತ್ರವಲ್ಲದೆ ಭಾರಿ ಪ್ರಮಾಣದ ಆಸ್ತಿ ಗಳಿಕೆಯಲ್ಲೂ ಮುಂಚೂಣಿಯಲ್ಲಿದ್ದಾರೆ. ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರೆಂದರೆ ತಪ್ಪಾಗದು. ಪ್ರಸ್ತುತ ಬೆಂಗಳೂರು ಮೂಲದ ಉದ್ಯಮಿ ಗೌರಿ ಸ್ಪಾಟ್​ ಅವರೊಂದಿಗೆ ಮುಂಬೈನ ಬಾಂದ್ರಾ ನಿವಾಸದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಖಾನ್ ಅವರ ಒಟ್ಟು ಆಸ್ತಿ ಹಾಗೂ ಐಷಾರಾಮಿ ಸಾಮ್ರಾಜ್ಯದ ವಿವರ ಇಲ್ಲಿದೆ.

ಅಮೀರ್ ಖಾನ್ ಒಟ್ಟು ಆಸ್ತಿ 

1973ರಲ್ಲಿ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ ಅಮೀರ್ ಖಾನ್, ಆ ಬಳಿಕ ದಂಗಲ್, ಲಗಾನ್, ದಿಲ್, ರಾಜಾ ಹಿಂದುಸ್ತಾನಿಯಂತಹ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. 1999ರಲ್ಲಿ ತಮ್ಮದೇ ಆದ ಅಮೀರ್ ಖಾನ್ ಪ್ರೊಡಕ್ಷನ್ಸ್ ಸ್ಥಾಪಿಸಿ ಯಶಸ್ವಿ ನಿರ್ಮಾಪಕರೂ ಆದರು. ವರದಿಗಳ ಪ್ರಕಾರ, ಅಮೀರ್ ಖಾನ್ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು ರೂ. 1,862 ಕೋಟಿ. ಇದು ಅವರ ಸಿನಿಮಾಗಳ ಸಂಭಾವನೆ, ಬ್ರ್ಯಾಂಡ್ ಜಾಹೀರಾತುಗಳು ಮತ್ತು ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಒಳಗೊಂಡಿದೆ ಎನ್ನಲಾಗಿದೆ. 

ಮುಂಬೈನಿಂದ ಅಮೆರಿಕದವರೆಗೆ ರಿಯಲ್ ಎಸ್ಟೇಟ್ ಆಸ್ತಿಗಳು

ಮೂಲಗಳ ಪ್ರಕಾರ, ಅಮೀರ್ ಖಾನ್ ಅವರು ದೇಶ-ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಮುಂಬೈನ ಪ್ರಮುಖ ಪ್ರದೇಶವಾದ ಬಾಂದ್ರಾದಲ್ಲಿ ಸುಮಾರು 60 ಕೋಟಿ ರೂ. ಮೌಲ್ಯದ 5,000 ಚದರ ಅಡಿಯ ಸಮುದ್ರಕ್ಕೆ ಮುಖ ಮಾಡಿರುವ ಐಷಾರಾಮಿ ಫ್ಲಾಟ್ ಹೊಂದಿದ್ದಾರೆ. ಆದಾಗ್ಯೂ, ಅವರ ಈ ಮನೆಯಲ್ಲಿಯೇ ಮದುವೆ ಕಾರ್ಯಕ್ರಮಗಳು ಜರುಗುತ್ತಿವೆ. ಇದರೊಂದಿಗೆ ಪಾಲಿ ಹಿಲ್‌ನ ಹಿಲ್ ವ್ಯೂ, ಬೆಲ್ಲಾ ವಿಸ್ಟಾ, ಮರಿನಾ ಅಪಾರ್ಟ್‌ಮೆಂಟ್ಸ್ ಸೇರಿದಂತೆ ಹಲವೆಡೆ ಇವರಿಗೆ ಸ್ವಂತ ಫ್ಲಾಟ್‌ಗಳಿವೆ.
ಹಾಲಿವುಡ್ ಸ್ಟಾರ್‌ಗಳ ನೆಚ್ಚಿನ ತಾಣವಾಗಿರುವ ಅಮೆರಿಕದ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿ ಅಮೀರ್ ಖಾನ್ ಅವರು 75 ಕೋಟಿ ರೂ. ಮೌಲ್ಯದ ಭವ್ಯ ಬಂಗಲೆ ಮತ್ತು ಮಹಾರಾಷ್ಟ್ರದ ಪ್ರಸಿದ್ಧ ಗಿರಿಧಾಮ ಪಂಚಗನಿಯಲ್ಲಿ 2 ಎಕರೆ ಫಾರ್ಮ್​ಹೌಸ್​ ಹೊಂದಿದ್ದು ಇದರ ಒಟ್ಟಾರೆ ಮೌಲ್ಯ 7 ಕೋಟಿ ರೂ. ಆಗಿದೆ. 

ದುಬಾರಿ ವಿಐಪಿ ಕಾರುಗಳು

ಅಮೀರ್ ಖಾನ್ ಬಳಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಐಷಾರಾಮಿ ಹಾಗೂ ಅತ್ಯಂತ ಸುರಕ್ಷಿತವಾದ ಕಾರುಗಳ ಕಲೆಕ್ಷನ್ ಇದೆ. ಅವುಗಳಲ್ಲಿ 10.5 ಕೋಟಿ ರೂ. ಬೆಲೆಯ ಮರ್ಸಿಡಿಸ್ ಬೆಂಜ್ S600 ಗಾರ್ಡ್,  7 ರಿಂದ 8 ಕೋಟಿ ರೂ. ರೋಲ್ಸ್ ರಾಯ್ಸ್ ಘೋಸ್ಟ್ ಹೊಂದಿದ್ದಾರೆ. ಜೊತೆಗೆ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪುರ್, ಬಿಎಂಡಬ್ಲ್ಯೂ 6-ಸೀರೀಸ್, ಟೊಯೋಟಾ ವೆಲ್‌ಫೈರ್ ಮತ್ತು ಮಹೀಂದ್ರಾ XUV500 ನಂತಹ ಪ್ರಭಾವಿ ಕಾರುಗಳು ಇವರ ಬತ್ತಳಿಕೆಯಲ್ಲಿವೆ.
ಸಿನಿಮಾ ರಂಗದಲ್ಲಿ ಸದಾ ವಿಭಿನ್ನ ಪ್ರಯೋಗಗಳನ್ನು ಮಾಡುವ ಅಮೀರ್ ಖಾನ್, ಆಸ್ತಿ ಗಳಿಕೆ ಹಾಗೂ ಹೂಡಿಕೆಯಲ್ಲೂ ಅಷ್ಟೇ ವ್ಯವಸ್ಥಿತವಾಗಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net