'ಆರ್​ಆರ್​ಆರ್' ಶೀರ್ಷಿಕೆ ತಾತ್ಕಾಲಿಕ ಅಂದಿದ್ದ ರಾಜಮೌಳಿ, ಅದರ ಪಾಪ್ಯುಲಾರಿಟಿ ನೋಡಿ ಈ ನಿರ್ಧಾರಕ್ಕೆ ಬಂದ್ರು!

the-makers-of-rrr-have-finally-unveiled-the-title-logo-and-the-motion-poster-of-the-movie-01
Published on

ನಿರ್ದೇಶಕ ರಾಜಮೌಳಿ ಆರ್​ಆರ್​ಆರ್​ (ರೌದ್ರಂ ರಣಂ ರುಧಿರಂ) ಸಿನಿಮಾ ಕೈಗೆತ್ತಿಕೊಂಡು ಒಂದಷ್ಟು ಭಾಗದ ಶೂಟಿಂಗ್​ ಮುಗಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆ ಏನೆಂಬುದನ್ನೂ ಅಧಿಕೃತಗೊಳಿಸಿದ್ದಾರೆ. ಆದರೆ, ನಿರ್ದೇಶಕರ ಪ್ರಕಾರ ಆರ್​ಆರ್​ಆರ್​ ಎಂಬುದು ಈ ಮೊದಲು ಚಿತ್ರದ ಶೀರ್ಷಿಕೆ ಆಗಿರಲಿಲ್ಲವಂತೆ.
ಹೌದು, ತಾತ್ಕಾಲಿಕವಾಗಿ ಒಂದು ಟೈಟಲ್​ ಬೇಕಾಗಿದ್ದಕ್ಕೆ ಅದನ್ನು ಆಯ್ದುಕೊಂಡಿದ್ದರು. ಕೊನೆಗೆ ದೇಶಾದ್ಯಂತ ಆರ್​ಆರ್​ಆರ್​ ಶೀರ್ಷಿಕೆಗೆ ಸಿಕ್ಕ ಪಾಪ್ಯುಲಾರಿಟಿ ನೋಡಿ ಅದನ್ನೇ ಯಾಕೆ ಸಿನಿಮಾ ಟೈಟಲ್​ ಆಗಿ ಬಳಸಿಕೊಳ್ಳಬಾರದೆಂಬ ಯೋಚನೆ ಬಂದಾಗ, ರೌದ್ರಂ ರಣಂ ರುಧಿರಂ ಆಗಿ ಬದಲಾಯಿತಂತೆ. ಹೀಗೆ ಟೈಟಲ್ ರಹಸ್ಯವನ್ನು ಸ್ವತಃ ರಾಜಮೌಳಿ ಹೊರಹಾಕಿದ್ದಾರೆ. ಅಂದಹಾಗೆ, ಜನವರಿ 8ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net