

ಬೆಂಗಳೂರು: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಬದುಕಿದ್ದಿದ್ದರೆ ಇಂದಿಗೆ 71ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಶಾರೀರಿಕವಾಗಿ ಅವರಿಲ್ಲದೆ 11 ವರ್ಷಗಳೇ ಗತಿಸಿದರೂ, ಇಂದಿಗೂ ವಿಷ್ಣು ಅಜರಾಮರ. ಹುಟ್ಟುಹಬ್ಬದ ಪ್ರಯುಕ್ತ ಅವರ ಪುಣ್ಯ ಭೂಮಿಯಾದ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಈ ಪ್ರಯುಕ್ತ, ಕಳೆದ ಮೂರು ದಿನಗಳಿಂದ ಹಲವು ಚಟುವಟಿಕೆಗಳು ಪ್ರಾರಂಭವಾಗಿವೆ.
ಮೈಸೂರಿನಲ್ಲಿ ಭಾರತೀ, ಅನಿರುದ್ಧ ಆಚರಣೆ: ಕಳೆದ ಕೆಲ ವರ್ಷಗಳಿಂದ ಮೈಸೂರಿನಲ್ಲಿಯೇ ವಿಷ್ಣುವರ್ಧನ್ ಕುಟುಂಬ ಸಾಹಸ ಸಿಂಹನ ಜನ್ಮದಿನದ ಸಂಭ್ರಮಾಚರಣೆಯನ್ನು ಮಾಡುತ್ತ ಬರುತ್ತಿದೆ. ಈ ಸಲವೂ ಇಡೀ ಕುಟುಂಬ ಅಲ್ಲಿಗೆ ತೆರಳಲಿದೆ. ಈ ಕುರಿತು ಪ್ರತಿಕ್ರಿಯೆ ನೀಡುವ ವಿಷ್ಣುವರ್ಧನ್ ಅಳಿಯ ಅನಿರುದ್ಧ ಜತ್ಕರ್, ‘ಎಂದಿನಂತೆ ನಮ್ಮ ಇಡೀ ಕುಟುಂಬ ಮೈಸೂರಿನಲ್ಲಿ ಇರಲಿದೆ. ಅಭಿಮಾನಿಗಳಿಂದ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ ಸೆರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎನ್ನುತ್ತಾರೆ.