ಇನ್ಮುಂದೆ ಹೀರೋ: ವಿಲನ್ ಪಾತ್ರ ಮಾಡದಿರಲು ಸೋನು ನಿರ್ಧಾರ

Sonu sood
Published on

ಲಾಕ್​ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಹಲವರಿಗೆ ಸಹಾಯ ಮಾಡುವ ಮೂಲಕ ನ್ಯಾಷನಲ್ ಹೀರೋ ಆಗಿದ್ದ ಸೋನು ಸೂದ್, ಇನ್ನು ಮುಂದೆ ಸಿನಿಮಾಗಳಲ್ಲೂ ಬರೀ ಹೀರೋ ಪಾತ್ರಗಳಲ್ಲೇ ಕಾಣಿಸಿಕೊಳ್ಳುವುದಕ್ಕೆ ತೀರ್ಮಾನಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಸೋನು ಕೆಲವು ಚಿತ್ರಗಳಲ್ಲಿ ಹೀರೋ ಪಾತ್ರಗಳನ್ನು ಮಾಡಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಅವರು ನಟಿಸಿದ್ದು ಹೆಚ್ಚಾಗಿ ನೆಗೆಟಿವ್ ಪಾತ್ರಗಳಲ್ಲೇ. ಆದರೆ, ಲಾಕ್​ಡೌನ್ ನಂತರ ಸೋನು ಅವರ ಇಮೇಜ್ ಬಹಳ ಬದಲಾಗಿದೆ.

ಜನ ಅವರನ್ನು ಹೀರೋ ಆಗಿ ನೋಡುತ್ತಿದ್ದಾರೆ. ಅಷ್ಟೇ ಅಲ್ಲ, ಚಿತ್ರರಂಗದ ಮಂದಿ ಸಹ ಅವರಿಗೆ ಹೆಚ್ಚುಹೆಚ್ಚು ಒಳ್ಳೆಯ ಪಾತ್ರಗಳನ್ನೇ ತರುತ್ತಿದ್ದಾರಂತೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ನೆಗೆಟಿವ್ ಪಾತ್ರಗಳನ್ನು ಬಿಟ್ಟು, ಬರೀ ಒಳ್ಳೆಯ ಪಾತ್ರಗಳನ್ನಷ್ಟೇ ಮಾಡುವುದಕ್ಕೆ ಸೋನು ನಿರ್ಧರಿಸಿದ್ದು, ಮುಂದಿನ ಕೆಲವು ವರ್ಷಗಳ ಕಾಲ ಹೀರೋ ಆಗಿಯೇ ನಟಿಸಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net