ಇಲ್ಲೇ ಸ್ವರ್ಗ ಇಲ್ಲೇ ನರಕ; ಕೇದಾರನಾಥ ಧಾಮದಲ್ಲಿ ಶೂಟಿಂಗ್​ ಆದ ಭಾರತದ ಮೊದಲ ಸಿನಿಮ

zx ZX
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಇಬ್ಬನಿ ತಬ್ಬಿದ ಇಳೆಯಲಿ', "ಸ್ವಾತಿ ಮುತ್ತಿನ ಮಳೆ ಹನಿಯೇ', "ಸಪ್ತಸಾಗರದಾಚೆ ಎಲ್ಲೋ', "ಭುವನಂ ಗಗನಂ'... ಹೀಗೆ ಸಿನಿಮಾ ಶೀರ್ಷಿಕೆಯಾಗಿರುವ ಹಲವು ಸಿನಿಮಾಗಳು ಬಂದಿವೆ. ಅದೇ ಸಾಲಿಗೆ ಸೇರುವ ಹೊಸ ಸಿನಿಮಾ "ಇಲ್ಲೇ ಸ್ವರ್ಗ ಇಲ್ಲೇ ನರಕ'. ಡಾ. ವಿಷ್ಣುವರ್ಧನ್​, ಡಾ. ಅಂಬರೀಷ್​, ಭಾರತಿ ವಿಷ್ಣುವರ್ಧನ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ರಾಜೇಂದ್ರ ಸಿಂಗ್​ ಬಾಬು ನಿರ್ದೇಶಿಸಿದ್ದ 1977ರ ಹಿಟ್​ "ನಾಗರಹೊಳೆ' ಚಿತ್ರದ ಹಾಡಿದು.

ಇದೀಗ ಇದೇ ಸಾಲನ್ನು ನಿರ್ದೇಶಕ ಲೋಕನಾಥ್​ ಎಂ.ವಿ. ತಮ್ಮ ಚಿತ್ರಕ್ಕೆ ಟೈಟಲ್​ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಾಯಕನಾಗಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ ಕೇದಾರನಾಥ ಧಾಮದಲ್ಲಿ ಚಿತ್ರೀಕರಣಗೊಂಡ ಮೊದಲ ಭಾರತೀಯ ಚಿತ್ರವಿದು ಎಂದು ಖುದ್ದು ಅವರೇ ಹೇಳಿಕೊಂಡಿದ್ದಾರೆ. ಲೋಕನಾಥ್​ಗೆ ಅಪೂರ್ವ ನಾಯಕಿಯಾಗಿದ್ದು, ನಾಗರಾಜ್​, ಆಶಾ, ಮಧು ಜತೆ ವಾರಾಣಸಿಯ ಸಂದೀಪ್​ ಗೌರ್​, ತಾನ್ಯಾ, ಲಕ್ಕಿ, ಶಶಿಕಾಂತ್​ ತಾರಾಗಣದಲ್ಲಿದ್ದಾರೆ.

ಉಳಿದಂತೆ ಚಿತ್ರಕ್ಕೆ ರಮೇಶ್​ ಕೃಷ್ಣ ಸಂಗೀತವಿರಲಿದೆ. ಕಾಶಿ, ಋಷಿಕೇಶದ ಸುತ್ತಮುತ್ತ ಶೂಟಿಂಗ್​ ನಡೆಸಲಾಗಿದೆ. ಈಗಾಗಲೇ ಚಿತ್ರದ ಸೆನ್ಸಾರ್​ ಆಗಿದ್ದು, ನವೆಂಬರ್​ನಲ್ಲಿ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net