

ಬೆಂಗಳೂರು: ದಕ್ಷಿಣದ ಸಿನಿಮಾಗಳಲ್ಲಿ ನಟಿಸಿ ಸದ್ಯ ಬಾಲಿವುಡ್ನಲ್ಲೇ ಬಿಜಿಯಾಗಿರುವ ನಟಿ ಇಲಿಯಾನಾ ಡಿಕ್ರೂಜ್ ಮತ್ತೆ ದಕ್ಷಿಣಕ್ಕೆ ಬರುವ ಸುಳಿವು ಸಿಕ್ಕಿದೆ. ಹಾಗೆಂದ ಮಾತ್ರಕ್ಕೆ ಅವರೇನು ನಾಯಕಿಯಾಗಿ ಎಂಟ್ರಿ ಕೊಡುತ್ತಿಲ್ಲ. ಬದಲಿಗೆ ಚಿತ್ರವೊಂದರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಮತ್ತೆ ಟಾಲಿವುಡ್ಗೆ ಬರುತ್ತಿದ್ದಾರಂತೆ. ರವಿತೇಜ ನಾಯಕನಾಗಿ ನಟಿಸುತ್ತಿರುವ ‘ರಾಮಾರಾವ್ ಆನ್ ಡ್ಯುಟಿ’ ಚಿತ್ರದಲ್ಲಿ ಇಲಿಯಾನಾ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
2018ರಲ್ಲಿ ರವಿತೇಜ ಅಭಿನಯದ ‘ಅಮರ್ ಅಕ್ಬರ್ ಆಂಟ್ಯೋನಿ’ ಚಿತ್ರದ ಮೂಲಕ ಇಲಿಯಾನಾ ಟಾಲಿವುಡ್ಗ್ ಕಮ್ಬ್ಯಾಕ್ ಮಾಡಿದ್ದರು. ಇದೀಗ ಮತ್ತೆ ರವಿತೇಜ ಜತೆಗೆ ನಟಿಸುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ರವಿತೇಜಗೆ ರಜಿಶಾ ವಿಜಯನ್, ದಿವ್ಯಾಂಶಾ ಕೌಶಿಕ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಶರತ್ ಮಾಂಡವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಸದ್ಯ ಶೂಟಿಂಗ್ ಹಂತದಲ್ಲಿದೆ. ಈ ನಡುವೆ ಐಟಂ ಹಾಡಿನ ತಯಾರಿಯೂ ಶುರುವಾಗಿದ್ದು, ಶೀಘ್ರದಲ್ಲಿ ಚಿತ್ರತಂಡವೇ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಲಿದೆ.