ಇಂದಿನಿಂದ ಇಕ್ಕಟ್; ಸಾಂಸಾರಿಕ ಕಥೆ...

Ikkat
Published on

ಬೆಂಗಳೂರು: ಏಪ್ರಿಲ್​ನಲ್ಲಿ ‘ಕೃಷ್ಣ ಟಾಕೀಸ್’ ಮತ್ತು ‘ರಿವೈಂಡ್’ ಚಿತ್ರಗಳು ಬಿಡುಗಡೆಯಾಗಿದ್ದೇ ಕೊನೆ. ಆ ನಂತರ ಲಾಕ್​ಡೌನ್​ನಿಂದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಈಗ ಮೂರು ತಿಂಗಳ ನಂತರ ಅಮೇಜಾನ್ ಪ್ರೖೆಮ್ಲ್ಲಿ ಬುಧವಾರ ‘ಇಕ್ಕಟ್’ ಬಿಡುಗಡೆಯಾಗುತ್ತಿದೆ. ಕಳೆದ ವರ್ಷ ಲಾಕ್​ಡೌನ್ ನಂತರ ಚಿತ್ರೀಕರಣಗೊಂಡ ಚಿತ್ರ ‘ಇಕ್ಕಟ್’. ಈಗ ಎರಡನೆಯ ಲಾಕ್​ಡೌನ್ ಮುಗಿದ ನಂತರ ಬಿಡುಗಡೆಯಾಗುತ್ತಿದೆ.

ಡೈವೋರ್ಸ್ ಹಂತದವರೆಗೂ ಹೋಗಿದ್ದ ದಾಂಪತ್ಯ, ಲಾಕ್​ಡೌನ್​ನಿಂದ ಹೇಗೆ ಸರಿಹೋಗುತ್ತದೆ ಎಂಬುದು ಚಿತ್ರದ ಕಥೆ. ಒಂದು ಜೋಡಿಯ ಕಥೆಯನ್ನು ಹಾಸ್ಯದ ರೂಪದಲ್ಲಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ನಾಗಭೂಷಣ್, ಭೂಮಿ ಶೆಟ್ಟಿ ನಟಿಸಿದ್ದಾರೆ. ಮಿಕ್ಕಂತೆ ಸುಂದರ್, ಆನಂದ್ ನೀನಾಸಂ ಮುಂತಾದವರು ಈ ಚಿತ್ರದಲ್ಲಿದ್ದಾರೆ. ಇಶಮ್ ಮತ್ತು ಹಸೀನ್ ಖಾನ್ ಚಿತ್ರ ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net