ಕರೊನಾ ವಾರಿಯರ್ಸ್ ಆಗ್ತಾರಂತೆ ಸ್ಪರ್ಧಿಗಳು; ಬಿಗ್ ಬಾಸ್ ಸ್ಪರ್ಧಿ ಶುಭಾ ಪೂಂಜಾ ಲೈವ್ ಚಾಟ್

IMG-20210512-WA0061
Published on

-

ಬೆಂಗಳೂರು; ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಬಿಗ್​ಬಾಸ್ ರಿಯಾಲಿಟಿ ಶೋ ರದ್ದಾಗಿದೆ. ಸ್ಪರ್ಧಿಗಳೆಲ್ಲ ಅವರವರ ಮನೆ ಸೇರಿದ್ದಾರೆ. ಇನ್ನೇನು ಹಾಗೆ ಮನೆಗೆ ತೆರಳಿದ ಬಿಗ್ ಸ್ಪರ್ಧಿಗಳು ಮತ್ತೆ ತಮ್ಮ ಮನೆಯಿಂದ ಹೊರಬರಲಿದ್ದಾರೆ.

ಹೌದು, ಬಿಗ್​ಬಾಸ್ ಸ್ಪರ್ಧಿ ಶುಭಾ ಪೂಂಜಾ ಕರೊನಾ ವಾರಿಯರ್ ಆಗಿ ರಸ್ತೆಗಿಳಿಯುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಫೇಸ್​ಬುಕ್ ಲೈವ್​ನಲ್ಲಿ ಅವರೇ ಹೇಳಿಕೊಂಡಿದ್ದಾರೆ. ಬುಧವಾರ ಕಲರ್ಸ್ ಕನ್ನಡ ಫೇಸ್​ಬುಕ್​ನಲ್ಲಿ ಲೈವ್ ಬಂದಿದ್ದ ಶುಭಾಗೆ ಸಾಕಷ್ಟು ಜನ ಪ್ರಶ್ನೆಯ ಮೇಲೆ ಪ್ರಶ್ನೆಗಳನ್ನು ಕೇಳಿದ್ದರು. ಬಿಗ್ ಮನೆಯ ಅನುಭವ ಸೇರಿ ಅಲ್ಲಿಂದ ಹೊರ ಬಂದ ಬಳಿಕ ಆದ ಅನುಭವವನ್ನೂ ಅವರು ವಿವರಿಸಿದ್ದರು.

ಹೀಗಿರುವಾಗಲೇ ಈ ಸಂಕಷ್ಟ ಸ್ಥಿತಿಯಲ್ಲಿ ಕರೊನಾ ವಾರಿಯರ್ ಆಗ್ತೀರಾ ಎಂಬ ಪ್ರಶ್ನೆಯೂ ತೇಲಿ ಬಂದಿತ್ತು. ಅದಕ್ಕೆ ಉತ್ತರಿಸಿದ ಶುಭಾ, ‘ಹೌದು, ಇಂಥ ಸಂಕಷ್ಟ ಸ್ಥಿತಿಯಲ್ಲಿ ಸಮಾಜಕ್ಕೆ ಏನಾದರೊಂದು ಸಹಾಯ ಮಾಡಬೇಕೆಂದುಕೊಂಡಿದ್ದೇನೆ. ಕೇವಲ ನಾನೊಬ್ಬಳೇ ಅಲ್ಲ. ಬಿಗ್​ಬಾಸ್​ನ ಎಲ್ಲ ಸ್ಪರ್ಧಿಗಳು ಇದಕ್ಕೆ ಕೈ ಜೋಡಿಸಲಿದ್ದಾರೆ. ಕರೊನಾ ವಾರಿಯರ್ ಆಗಿ ನಮ್ಮ ಕೈಲಾದ ಸೇವೆ ಮಾಡಲಿದ್ದೇವೆ’ ಎಂದಿದ್ದಾರೆ.

ಇದನ್ನು ಹೊರತುಪಡಿಸಿ, ಬಿಗ್​ಬಾಸ್ ಮನೆ, ಬೆಳಗಿನ ಹಾಡು, ಅಲ್ಲಿನ ಸ್ಪರ್ಧಿಗಳು ಎಲ್ಲವನ್ನೂ ಶುಭಾ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ನಿತ್ಯ ಕುಳಿತು ಹರಟೆ ಹೊಡೆಯುತ್ತಿದ್ದ ಸ್ಮಿಮ್ಮಿಂಗ್ ಫೂಲ್ ಏರಿಯಾ ಸ್ನೇಹಿತರ ಕೀಟಲೆ ಹೀಗೆ ಎಲ್ಲವೂ ತುಂಬ ಕಾಡುತ್ತಿವೆಯಂತೆ. ಇದರ ಜತೆಗೆ ಒಂದಷ್ಟು ಕೆಜಿ ತೂಕವನ್ನೂ ಕಳೆದುಕೊಂಡಿರುವ ಬಗ್ಗೆ ಶುಭಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net