ನಾನೂ 'ರಾಬರ್ಟ್'​ ಸಿನಿಮಾ ನೋಡುತ್ತೇನೆ ಎಂದ ಸಿಎಂ ಯಡಿಯೂರಪ್ಪ

darshan and yediyurappa
darshan and yediyurappa
Published on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಕರ್ನಾಟಕ ಕೃಷಿ ಇಲಾಖೆಗೆ ರಾಯಭಾರಿಯಾಗಿದ್ದಾರೆ. ಇನ್ಮುಂದೆ ಅವರು ಕೃಷಿ ಇಲಾಖೆಯ ಕಾರ್ಯಕ್ರಮಗಳಿಗೆ ಮುಂಚೂಣಿ ವಹಿಸಲಿದ್ದಾರೆ.

ಇದೇ ಖುಷಿಯಲ್ಲಿ ದರ್ಶನ್ ಅವರನ್ನು ಅಭಿನಂದಿಸಿರುವ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ನಾನು ರಾಬರ್ಟ್​ ಸಿನಿಮಾವನ್ನು ನೋಡುತ್ತೇನೆ ಎಂದು ಹೇಳಿದ್ದಾರೆ.

ಅಪರೂಪದ‌ ವಿಶೇಷ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಡಿದ್ದಾರೆ. ಚಲನಚಿತ್ರ ರಂಗದಲ್ಲಿ‌ ಎತ್ತರಕ್ಕೆ ರ‌ಬೆಳೆದಿರುವ ದರ್ಶನ್ ನಟನೆಯ ಜೊತೆಗೆ ಕೃಷಿಕ ರೈತಾಪಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ‌. ರೈತರ ಪರವಾಗಿ ದರ್ಶನ್‌ಗೆ ಅಭಿನಂದನೆಗಳು. ಕೃಷಿ ಇಲಾಖೆಗೆ ಕೃಷಿ ರಂಗಕ್ಕೆ ದರ್ಶನ್ ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಮೆಚ್ಚುಗೆಯ ಸಂಗತಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಾನು ಸಹ ದರ್ಶನ್ ಅವರ "ರಾಬರ್ಟ್" ಚಿತ್ರವನ್ನು ನೋಡುತ್ತೇನೆ. ದರ್ಶನ್ ಒಬ್ಬ ಉತ್ತಮ ನಟ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ್,‌ ಇದು ಕೃಷಿ ಇಲಾಖೆಯ ಅಭೂತಪೂರ್ವ ಕಾರ್ಯಕ್ರಮವಾಗಿದೆ. ಚಾಲೆಂಜಿಂಗ್ ಸ್ಟಾರ್ ಚಿತ್ರರಂಗದಲ್ಲಿ ನಟನೆಯ ಜೊತೆಗೆ ಕೃಷಿ ಪಶುಸಂಗೋಪನೆ ಚಟುವಟಿಕೆಗಳನ್ನೂ ನಡೆಸುತ್ತಿರುವ ದರ್ಶನ್ ಕೃಷಿ ಕಾಯಕದ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ. ರೈತ ನಾಯಕರಾಗಿ ರೈತಪರ ಹೋರಾಟ ಮಾಡಿ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿರುವ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಸಂತಸದ ವಿಚಾರ‌ ಎಂದರು.

ದರ್ಶನ್ ಎತ್ತರವಿರುವಷ್ಟು ಅವರ ಹೃದಯವೂ ಅಷ್ಟೇ ವಿಶಾಲವಾಗಿದೆ. ದರ್ಶನ್ ಫಾರ್ಮ್ ಎನ್ನುವುದು ಸಣ್ಣ ಝೂ ಇದ್ದಂತಿದೆ. ದರ್ಶನ್ ಸ್ವತಃ ಕೃಷಿ ಚಟುವಟಿಕೆಯನ್ನೂ ಮಾಡುತ್ತಾರೆ. ದರ್ಶನ್ ಸ್ವತಃ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದಿರುವುದು ಖುಷಿಯ ವಿಚಾರ. ದೊಡ್ಡದೊಡ್ಡ ಕೆಲ ಸೂಪರ್ ಸ್ಟಾರ್‌ಗಳು ಸಂಭಾವನೆ ಪಡೆದು ದೊಡ್ಡದೊಡ್ಡ ಕಂಪೆನಿ ಕಾರ್ಯಕ್ರಮಗಳಿಗೆ ರಾಯಭಾರಿಯಾಗುತ್ತಾರೆ. ಆದರೆ, ದರ್ಶನ್ ಕೃಷಿ ಇಲಾಖೆಗೆ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿರುವುದು ದರ್ಶನ್ ಅವರಲ್ಲಿರುವ ಕೃಷಿ ಉತ್ಸಾಹ ರೈತ ಪರ ಕಾಳಜಿಯನ್ನು ತೋರಿಸುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net