'ನಾನೇ ಪಾತ್ರೆ ತೊಳಿತೇನೆ, ಅಡುಗೆ ಮಾಡ್ತೇನೆ ನಾಲ್ಕು ಗಂಟೆಗೆ ಎದ್ದೇಳ್ತೇನೆ': ಕಿಚ್ಚ ಸುದೀಪ್..Sudeep

'ನಾನೇ ಪಾತ್ರೆ ತೊಳಿತೇನೆ, ಅಡುಗೆ ಮಾಡ್ತೇನೆ ನಾಲ್ಕು ಗಂಟೆಗೆ ಎದ್ದೇಳ್ತೇನೆ':  ಕಿಚ್ಚ ಸುದೀಪ್..Sudeep
Published on: 
  • ಪಾತ್ರೆ ತೊಳೆಯೋಕೆ, ತಿಂದ ತಟ್ಟೆ ತೊಳಿಯೋಕೆ ಇಗೋ ಯಾಕೆ ಎಂದು ಪ್ರಶ್ನಿಸಿದ ಕಿಚ್ಚ ಸುದೀಪ್.

  • ಬಿಗ್​ಬಾಸ್ ಮನೆಯಲ್ಲಿ ಪಾತ್ರೆ ತೊಳೆಯೋಕೆ ಹೊಡೆದಾಡಿಕೊಳ್ಳುವವರಿಗೆ ಸುದೀಪ್ ಅವ್ರಿಂದ ನೀತಿ ಪಾಠ.

  • ನಿಮಗಾಗಿ ಸಮಯ ಕೊಡಿ...ಏನೆಲ್ಲ ಮಾಡಿದ್ದೇನೆ ಎನ್ನುವ ಪಟ್ಟಿ ಹಾಕಿಕೊಳ್ಳಿ ಯಶಸ್ಸು ಪಕ್ಕ ಸಿಗತ್ತೆ ಎಂದ ಕಿಚ್ಚ.

ಪಿತೃ ಪ್ರಧಾನ ಸಮಾಜದಲ್ಲಿ ಮಹಿಳೆಯರು ಪಾತ್ರೆ ತೊಳಿಯಬೇಕು..ಅಡುಗೆ ಮಾಡಬೇಕು ಮನೆ ಕೆಲಸ ನೋಡಿಕೊಳ್ಳಬೇಕು ಎನ್ನುವ ಒಂದು ಆಚಾರ ಇಂದಿಗೂ ಮಾಸಿಲ್ಲ.. ಎಐ ಬಳಕೆ ಮಾಡುತ್ತಿರುವ ಈ ಕಾಲಘಟದಲ್ಲಿಯೂ ತಾರತಮ್ಯಕ್ಕೆ ಅಂತ್ಯ ಕಂಡಿಲ್ಲ. ಇದಕ್ಕೆ ತಾಜಾ ಉದಾಹರಣೆ ಬಿಗ್​ಬಾಸ್ ಮನೆಯ ಸ್ಪರ್ಧಿಗಳು.

ಹೌದು, ಈ ಬಾರಿಯ ಬಿಗ್​ಬಾಸ್​​​ ಸೀಸನ್ 13 ಕನ್ನಡದಲ್ಲಿ ಪಾತ್ರೆ ತೊಳೆಯುವ ವಿಚಾರಕ್ಕೆ ಭಾರೀ ಗಲಾಟೆ ಮಾಡಲಾಗುತ್ತದೆ. ಪಾತ್ರೆ ತೊಳಿಯಲು, ಕಸ ಗುಡಿಸಿ ಮನೆಯನ್ನು ಸ್ವಚ್ಛವಾಗಿಡಲು ಹಿಂದೇಟು ಹಾಕುತ್ತಾರೆ. ಇದೇ ವಿಚಾರವಾಗಿ ಆಸಿಯಾ ಮತ್ತು ಗಗನ್​ ಹಾಗೂ ಸೌಂದರ್ಯಾ ಮತ್ತು ಗಗನ್ ಚಿನ್ನಪ್ಪ ನಡುವೆ ತೀವ್ರ ವಾಗ್ದಾಳಿ ನಡೆದಿತ್ತು. ಈ ಬಗ್ಗೆ ಸುದೀಪ್​ ಅವರು ವಾರದ ಕತೆಯಲ್ಲಿ ಮುನ್ನೆಲೆಗೆ ತಂದರು. ನೀವು ತಿಂದಿರುವ ತಟ್ಟೆ, ಪಾತ್ರೆ ತೊಳೆಯಲು ಇರುವ ಸಮಸ್ಯೆ ಏನು? ಇರುವ ನಾಲ್ಕು ಪಾತ್ರೆ ತೊಳಿದ್ರೆ ಏನಾಗುತ್ತೆ ಎಂದು ಪ್ರಶ್ನೆ ಮಾಡಿದ್ದರು.

ಸುದೀಪ್​ ಏನಂದ್ರು?

'ಪಾತ್ರೆ ತೊಳೆಯೋದೆ ಈ ಮನೆಯಲ್ಲಿ ಒಂದು ದೊಡ್ಡ ಸಮಸ್ಯೆ. ಇರುವ ನಾಲ್ಕು ಪಾತ್ರೆ. ತಿಂದ ತಟ್ಟೆ ತೊಳೆಯೋದಕ್ಕೆ ಹೀಗ್ಯಾಕೆ ಮಾಡ್ತೀರ. ನಿಮ್ಗೆ ಇಗೋನಾ?. ಒಂದು ಕೆಲಸ ಮಾಡಿ ತಿಂದ ತಟ್ಟೆಯಲ್ಲೇ ತೊಳೆಯದೆ ತಿನ್ನಿ...ಅಡುಗೆ ಮಾಡಿದ ಪಾತ್ರೆಯನ್ನೇ ಮತ್ತೆ..ಮತ್ತೆ ಬಳಕೆ ಮಾಡಿ ಆಗ ತೊಳೆಯುವ ವ್ಯವಧಾನವೇ ಇರೋದಿಲ್ಲ' ಎಂದರು ಸುದೀಪ್​.

ಮುಂದುವರೆದು, 'ನಿಮಗೆ ಗೊತ್ತಿರಲಿ ಅಂತ ಹೇಳ್ತೇನೆ. ನಾನು ನಿತ್ಯ ಎರಡು ಗಂಟೆಗೆ ಮಲಗ್ತೇನೆ, ನಾಲ್ಕು ಗಂಟೆಗೆ ಎದ್ದೇಳ್ತೇನೆ. ಇಷ್ಟೇ ನನ್ನ ನಿದ್ದೆ. ನನ್ನ ಅಡುಗೆ ನಾನೇ ಮಾಡಿಕೊಳ್ಳುತ್ತೇನೆ. ನಾನೇ ಪಾತ್ರೆ ತೊಳೆಯುತ್ತೇನೆ' ಎಂದು ಹೇಳಿದರು.

'ಸಣ್ಣ ಪುಟ್ಟ ವಿಚಾರಕ್ಕೂ ಯಾಕೆ ಗಲಾಟೆ ಮಾಡಿಕೊಳ್ತೀರಾ. ಇನ್ಮುಂದೆ ನಿಮ್ಮ ಆಟವೆಲ್ಲ ಮುಗಿದ ನಂತರ ನಿಮಗಾಗಿ ಸಮಯ ಕೊಟ್ಟುಕೊಳ್ಳಿ. ಇವತ್ತು ನಾನೇಲ್ಲ ಮಾಡಿದೆ ಎನ್ನುವ ಪಟ್ಟಿ ಮಾಡಿಕೊಳ್ಳಿ. ಯಾರಿಗೆ ನನ್ನಿಂದ ಬೇಸರವಾಯ್ತು ಎಷ್ಟು ಜನರನ್ನ ನಗಿಸಿದ್ದೇನೆ ಎನ್ನುವುದನ್ನು ಮೆಲುಕು ಹಾಕಿ..ಆಗ ಮುಂದೇನು ಮಾಡ್ಬೇಕು ಅಥವಾ ಬೇಡ ಎನ್ನುವ ವಿಚಾರವನ್ನು ನೀವು ಮುಂದಿನ ದಿನಕ್ಕೆ ಕಾರ್ಯರೂಪಕ್ಕೆ ತರಬಹುದು ಎಂದು' ಹೀಗೆ ಸ್ಪರ್ಧಿಗಳಿಗೆ ಸುದೀಪ್ ಸಲಹೆ ಕೊಟ್ಟರು.

'ನಾವು ಕನ್ನಡಿ ನೋಡಿಕೊಂಡಾಗ ನಮ್ಮ ಮುಖವು ನಾವು ಮಾಡಿದ್ದೆಲ್ಲ ಚುಚ್ಚುವಂತೆ ಮಾಡಬಾರದು. ಹೀಗಾಗಿ ಎಲ್ಲಿ ಏನು ಮಾಡಿದ್ದೇವೆ. ವಾರ ಪೂರ್ತಿ ಏನು ಮಾಡಿದ್ವಿ ಶನಿವಾರ ಏನು ಹೇಳ್ತಿವಿ' ಎನ್ನುವುದನ್ನು ಯೋಚನೆ ಮಾಡಿ ಎಂದು ಹೇಳಿದರು.