ಲಾಕ್ಡೌನ್ ನಿಂದ ಸಾಕಾಗಿದೆ, ನಂಗೇನು ಅಪ್ಪ ಅಮ್ಮ ದುಡ್ಡು ಕೊಡೋಲ್ಲ, ಕೆಲಸ ಮಾಡಲೇಬೇಕು ಎಂದ ನಟಿ ಶ್ರುತಿ ಹಾಸನ್

images_35_600x400
Published on

ಚೆನ್ನೈ; ಕರೊನಾ ಹಾವಳಿಯಿಂದಾಗಿ ಮತ್ತೆ ದೇಶದಲ್ಲಿ ಲಾಕ್ ಡೌನ್ ಸದ್ದು ಜೋರಾಗಿದೆ. ಇದರಿಂದ ಚಿತ್ರರಂಗವೂ ಸಂಪೂರ್ಣ ಕೆಲಸ ನಿಲ್ಲಿಸಿದೆ. ಅನೇಕ ನಟ ನಟಿಯರು, ಸಿನಿ ಕಾರ್ಮಿಕರು, ತಂತ್ರಜ್ಞರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೆ ಲಾಕ್ ಡೌನ್ ಬಗ್ಗೆ ನಟಿ ಶ್ರುತಿ ಹಾಸನ್ ಮುನಿಸಿಕೊಂಡಿದ್ದಾರೆ.

ನನಗೇನು ನನ್ನ ಅಪ್ಪ ಅಮ್ಮ ಕಾಸು ಕೊಡುವುದಿಲ್ಲ. ನನ್ನ ಖರ್ಚುಗಳನ್ನು ನಿಭಾಯಿಸುವುದು ಹೇಗೆ? ಆದಷ್ಟು ಬೇಗ ಈ ಲಾಕ್ ಡೌನ್ ಮುಗಿಸಿ ಕೆಲಸಕ್ಕೆ ಹೋಗಬೇಕು, ಕೆಲಸ ಮಾಡಬೇಕು, ಸಂಪಾದಿಸಬೇಕು ಎಂದು ಹೇಳಿದ್ದಾರೆ.

ಶ್ರುತಿ ಹಾಸನ್ ಖಾಸಗಿ ವಾಹಿನಿಗೆ ವರ್ಚುವಲ್ ಮೂಲಕ ನೀಡಿರುವ ಸಂದರ್ಶನದಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ. ಎಲ್ಲರಿಗೂ ಇರುವಂತೆ ನಮಗೂ ಹಣಕಾಸಿನ ಸಮಸ್ಯೆ ಇವೆ. ಇದರಿಂದ ಬಚ್ಚಿಡುವಂತದ್ದು ಏನೂ ಇಲ್ಲ. ಲಾಕ್ಡೌನ್ ಅಂತ್ಯವಾದ ಕೂಡಲೇ ಶೂಟಿಂಗ್ ಪ್ರಾರಂಭಿಸುತ್ತೇನೆ ಎಂದು ಹೇಳಿದ್ದಾರೆ.

ಶ್ರುತಿ ಹಾಸನ್ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ನಲ್ಲಿ ಅಭಿನಯಿಸುತ್ತಿದ್ದಾರೆ. ಸಲಾರ್ ಸಿನಿಮಾವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net