ಯಾರಾದರೂ ನನ್ನನ್ನು ಆ ರೀತಿ ಕರೆದಾಗ ತುಂಬಾ ಇಷ್ಟವಾಗುತ್ತದೆ ಅಂದ್ರು ಮಿಲ್ಕಿ ಬ್ಯೂಟಿ ತಮನ್ನಾ! Tamannaah Bhatia

Tamannaah Bhatia
Published on

Tamannaah Bhatia : ತಮನ್ನಾ ಎರಡು ದಶಕಗಳಿಂದ ಸ್ಟಾರ್​ ನಾಯಕಿಯಾಗಿ ಸಿನಿಮಾ ರಂಗದಲ್ಲಿ ಮಿಂಚು ಹರಿಸುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಮತ್ತು ಇತರ ಭಾಷೆಗಳಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದು, ಬಹುಭಾಷಾ ನಾಯಕಿ ಎನಿಸಿಕೊಂಡಿದ್ದಾರೆ.

ಸಿನಿಮಾಗಳಲ್ಲಿ ಪ್ರಮುಖ ನಾಯಕಿಯಾಗಿ ನಟಿಸುವುದರ ನಡುವೆ ವಿಶೇಷ ಹಾಡುಗಳು ಹಾಗೂ ಐಟಂ ಸಾಂಗ್​ಗಳಲ್ಲೂ ಸೊಂಟ ಬಳುಕಿಸುತ್ತಿದ್ದಾರೆ. ಇದು ಅವರ ವೃತ್ತಿಜೀವನಕ್ಕೆ ಪ್ಲಸ್ ಕೂಡ ಆಗಿದ್ದು, ಯಾವುದೇ ನಷ್ಟವನ್ನು ತಂದಿಲ್ಲ. ಮತ್ತೊಂದೆಡೆ, ಅವರಿಗೆ ಇನ್ನೂ ನಾಯಕಿಯಾಗಿ ಅವಕಾಶಗಳು ಸಿಗುತ್ತಿರುವುದು ಗಮನಾರ್ಹ.

ಬಾಲಿವುಡ್ ನಟ ವಿಜಯ್ ವರ್ಮಾ ಅವರ ಪ್ರೀತಿಯಲ್ಲಿ ಬಿದ್ದ ಬಳಿಕ ತಮನ್ನಾರಿಗೆ ಅವಕಾಶಗಳು ಸ್ವಲ್ಪ ಕಡಿಮೆಯಾದರು ಕೂಡ ಅವರ ಕ್ರೇಜ್ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಇದಕ್ಕೆ ಕಾರಣವೆಂದರೆ ಅವರಿನ್ನೂ ಐಟಂ ಹಾಡುಗಳಲ್ಲಿ ಸ್ಪೆಷಲಿಸ್ಟ್ ಎಂದು ಪರಿಗಣಿಸಲಾಗಿದೆ. ಅವರು ಸೊಂಟ ಬಳುಕಿಸಿದ ಹಿಂದಿಯ ಸ್ತ್ರೀ ಮತ್ತು ರಜನಿಕಾಂತ್ ನಟಿಸಿದ ತಮಿಳು ಚಿತ್ರ ಜೈಲರ್ (ಅದರಲ್ಲಿ ಅವರು ವಿಶೇಷ ಗೀತೆಯಲ್ಲಿ ನಟಿಸಿ ಅತಿಥಿ ಪಾತ್ರದಲ್ಲಿಯೂ ನಟಿಸಿದ್ದರು) ಚಿತ್ರಗಳು ಭರ್ಜರಿ ಯಶಸ್ಸು ಕಂಡಿವೆ.

ಅಂದಹಾಗೆ ತಮನ್ನಾ ಅವರನ್ನು ಬಹಳ ಸಮಯದಿಂದ ಎಲ್ಲರೂ ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಿದ್ದಾರೆ. ಅದಕ್ಕೆ ಸೂಕ್ತವಾದ ಗ್ಲಾಮರ್ ಕೂಡ ಅವರಲ್ಲಿದೆ. ನೋಡಲು ಹಾಲಿನಂತೆ ಬೆಳ್ಳಗ್ಗೆ ಇರುವ ತಮನ್ನಾರನ್ನು ಮಿಲ್ಕಿ ಬ್ಯೂಟಿ ಎಂದರೇ ತಪ್ಪಾಗಲಾರದು. ಗ್ಲಾಮರ್​ನಲ್ಲೂ ಒಂದು ಕೈ ಮೇಲಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತಮನ್ನಾ, ಅಭಿಮಾನಿಗಳು ಆರಂಭದಲ್ಲಿ ತಮಗೆ ಮಿಲ್ಕಿ ಬ್ಯೂಟಿ ಎಂಬ ಬಿರುದನ್ನು ನೀಡಿದ್ದನ್ನು ನೆನಪಿಸಿಕೊಂಡರು. ಅಭಿಮಾನಿಗಳು ಹೆಸರಿಟ್ಟ ಬಳಿಕ ಮಾಧ್ಯಮಗಳು ಅದನ್ನು ಬಹಳಷ್ಟು ಬಳಸಿದವು. ಹೀಗಾಗಿ ಈ ಹೆಸರು ಹೆಚ್ಚು ಪ್ರಚಾರ ಪಡೆಯಿತು. ಆದರೆ, ಇತ್ತೀಚೆಗೆ ಕೆಲ ನಟಿಯರನ್ನು ಅದೇ ಹೆಸರಿನೊಂದಿಗೆ ಕರೆಯಲಾಗುತ್ತಿದೆ. ಹೀಗಾಗಿ ತಮನ್ನಾರಿಗೆ ಬೇಸರ ಆಗಿರಬಹುದೆಂದು ಕೆಲವರು ಭಾವಿಸಿದ್ದರು. ಆದರೆ, ಆ ರೀತಿ ಏನು ಇಲ್ಲ ಎಂದು ತಮನ್ನಾ ಹೇಳಿದ್ದಾರೆ.

ಯಾರೇ ಆಗಲಿ ಆ ರೀತಿ ಕರೆದಾಗ ನನಗೆ ತುಂಬಾ ಇಷ್ಟವಾಗುತ್ತದೆ ಎಂದು ತಮನ್ನಾ ಹೇಳಿದರು. ಅದೇ ರೀತಿ, ತಾನು ಸುಂದರವಾಗಿರುವುದರಿಂದ ತನಗೆ ಉತ್ತಮ ಅವಕಾಶಗಳು ಸಿಗಲಿಲ್ಲ ಎಂದರು. ನಾನು ನಟನೆಗೆ ಪ್ರಾಮುಖ್ಯತೆ ನೀಡುತ್ತೇನೆ ಎಂದರು. ಅಲ್ಲದೆ, ಈ ವರ್ಣರಂಜಿತ ಜಗತ್ತಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಇಲ್ಲಿನ ವಾತಾವರಣಕ್ಕೆ ತಕ್ಕಂತೆ ಸುಂದರವಾಗಿರಬೇಕು ಮತ್ತು ಅದಕ್ಕಾಗಿಯೇ ನಾನು ನಿರಂತರವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಅಂದಹಾಗೆ ತಮನ್ನಾ ಅವರು ನಾಯಕಿಯಾಗಿ ನಟಿಸಿರುವ ಇತ್ತೀಚಿನ ತೆಲುಗು ಚಿತ್ರ ಒಡೆಲಾ-2 ಏಪ್ರಿಲ್​ 17ರಂದು ತೆರೆಗೆ ಬಂದಿತು. ಈ ಸಿನಿಮಾದ ಮಿಶ್ರ ಪತ್ರಿಕ್ರಿಯೆ ಪಡೆದುಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net