ಆಕೆಯನ್ನು ನೋಡಿದ್ರೆ ಉರಿಯುತ್ತೆ! ವಿಜಯ್​ ಜೊತೆಗೆ ತ್ರಿಷಾ ಡೇಟಿಂಗ್​ ವಿವಾದ ಬೆನ್ನಲ್ಲೇ ಗಾಯಕಿ ಸುಚಿತ್ರಾ ಕಿಡಿ

ವಿಜಯ್​-ತ್ರಿಷಾ ಜೋಡಿ
ವಿಜಯ್​-ತ್ರಿಷಾ ಜೋಡಿ
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ್​-ತ್ರಿಷಾ ಡೇಟಿಂಗ್​ ವಿವಾದ ಬೆನ್ನಲ್ಲೇ ಗಾಯಕಿ ಸುಚಿತ್ರಾ ಕಿಡಿ
  • ನನಗೆ ಆಕೆಯನ್ನು ಕಂಡರೆ ಸ್ವಲ್ಪವೂ ಇಷ್ಟವಿಲ್ಲ
  • ನಟಿಯ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಸುಚಿತ್ರಾ ಹೊಸ ವಿವಾದ
ಚೆನ್ನೈ: ತಮಿಳು ಚಿತ್ರರಂಗದ​ ಸೂಪರ್​ ಸ್ಟಾರ್, ಟಿವಿಕೆ ಪಕ್ಷದ ನಾಯಕ​ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಸಿತು. ಇವರಿಬ್ಬರ ಡಿವೋರ್ಸ್​ಗೆ ಮೂಲ ಕಾರಣವೇ ನಟಿ ತ್ರಿಷಾ ಎಂಬ ಆರೋಪಗಳು ಕೇಳಿಬಂದಿದ್ದು, ಅನೇಕರ ಟೀಕೆಗಳಿಗೆ ಕಾರಣವಾಯಿತು. ಇದಕ್ಕೆ ಪುಷ್ಠಿ ಎನ್ನುವಂತೆ ಕೆಲವು ತಿಂಗಳ ಹಿಂದೆ ಮದುವೆ ಸಮಾರಂಭದಲ್ಲಿ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಸಾಕಷ್ಟು ವದಂತಿಗಳನ್ನು ಹುಟ್ಟುಹಾಕಿತು. ಈಗ ಈ ವಿಷಯವನ್ನೇ ಮುಂದಿಟ್ಟು ಮಾತನಾಡಿರುವ ಗಾಯಕಿಯೊಬ್ಬರು ತ್ರಿಷಾ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ.
ದಾಂಪತ್ಯದಲ್ಲಿ ಬಿರುಕು ಮೂಡಿರುವ ಸಂದರ್ಭದಲ್ಲೇ ತ್ರಿಷಾ ಜೊತೆಗೆ ವಿಜಯ್​ ಮದುವೆಗೆ ಕಾರಿನಲ್ಲಿ ಬಂದ ದೃಶ್ಯ ಸದ್ಯ ಊಹಾಪೋಹಗಳೇ ಸತ್ಯ ಎಂದು ಒತ್ತಿ ಹೇಳಿತು. ಪ್ರಸ್ತುತ, ತಮಿಳುನಾಡು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ವಿಜಯ್​, ಸರ್ಕಾರ ರಚಿಸಲು ಬಹುಮತ ತೋರಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗಲೇ, ಅತ್ತ ಗಾಯಕಿ ಸುಚಿತ್ರಾ ನಟನ ಬಹುಕಾಲದ ಗೆಳತಿ ತ್ರಿಷಾ ಕಂಡರೆ ನನಗೆ ಸ್ವಲ್ಪವೂ ಇಷ್ಟವಿಲ್ಲ ಎಂದಿರುವುದು ಸದ್ಯ ಹಲವರ ಹುಬ್ಬೇರಿಸಿದೆ.
ಇತ್ತೀಚಿನ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ಸುಚಿತ್ರಾ, ನನಗೆ ವಿಜಯ್​ ಅವರು ಇಷ್ಟ. ಆದರೆ, ನಟಿ ತ್ರಿಷಾ ಕೃಷ್ಣನ್ ಕಂಡರೆ ಕಿಂಚಿತ್ತು ಆಗೋದಿಲ್ಲ ಎಂದರು. ಇಲ್ಲಿ ಯಾವ ಕಾರಣಕ್ಕೆ ತಮಗೆ ಇಷ್ಟವಿಲ್ಲ ಎಂಬುದನ್ನು ಹೇಳದ ಗಾಯಕಿ, ನನ್ನ ಅಭಿಪ್ರಾಯ, ಅನಿಸಿಕೆಗಳನ್ನು ಯಾರಿಗೂ ಹೆದರದೆ ಓಪನ್​ ಆಗಿ ಹೇಳುವ ತನ ನನ್ನದು ಎಂದರು. ಸಕ್ಸಸ್​ಫುಲ್​ ಜನರ ಜೀವನದಲ್ಲಿ ಕೆಲವು ಹುಳಗಳು (ನಟಿಯನ್ನು ಪರೋಕ್ಷವಾಗಿ ಉಲ್ಲೇಖ) ಪ್ರವೇಶಿಸುತ್ತವೆ. ವಿಜಯ್ ತನ್ನ ಹೆತ್ತವರು ಮತ್ತು ಪತ್ನಿಯಿಂದ ದೂರವಾಗುವ ಮೂಲಕ ಒಂಟಿಯಾಗಿ ಬದುಕುತ್ತಿದ್ದಾರೆ. ಹಾಗಂತ, ಇಲ್ಲಿಯವರೆಗೆ ಯಾವುದರ ಹಿಂದೆಯೂ ಓಡಿಲ್ಲ. ಪ್ರಸ್ತುತ, ರಾಜಕೀಯಕ್ಕೆ ಎಂಟ್ರಿಕೊಟ್ಟಿರುವ ವಿಜಯ್​ಗೆ ತಂದೆ ಚಂದ್ರಶೇಖರ್ ಅವರ ಅಗತ್ಯವಿದೆ ಎಂದರು.
ರಾಜಕೀಯ ಸಮಸ್ಯೆಗಳನ್ನು ಭೇದಿಸಿ ಮುನ್ನಡೆಯಬೇಕು ಎಂದರೆ, ಖಂಡಿತ ದಳಪತಿಗೆ ತಂದೆಯ ಸಪೋರ್ಟ್​ ಬೇಕೇ ಬೇಕು. ಇಲ್ಲವಾದರೆ, ಅವರು ರಾಜಕೀಯದಲ್ಲಿ ಏನೂ ಸಾಧಿಸಲು ಆಗಲ್ಲ ಎಂದಿದ್ದಾರೆ. ಸದ್ಯ ಗಾಯಕಿ ಈ ಹೇಳಿಕೆಗಳು ಅನೇಕರನ್ನು ಅಚ್ಚರಿಗೆ ದೂಡಿದ್ದು, ಹೊಸ ವಿವಾದಕ್ಕೂ ಕಾರಣವಾಗಿದೆ. ಈ ಕುರಿತು ತ್ರಿಷಾ ಪ್ರತಿಕ್ರಿಯಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಏನಿದು ವಿಜಯ್​-ತ್ರಿಷಾ ವದಂತಿ?

ಕಳೆದ ಹಲವು ವರ್ಷಗಳಿಂದ ನಟಿ ತ್ರಿಷಾ ಕೃಷ್ಣನ್ ಜೊತೆ ವಿಜಯ್ ಅವರ ಹೆಸರು ಆಗಾಗ್ಗೆ ಕೇಳಿಬರುತ್ತಲೇ ಇತ್ತು. ಇದು ಕಾಲಿವುಡ್​ ಅಂಗಳದಲ್ಲಿ ದೊಡ್ಡ ವದಂತಿಯಾಗಿ ಹರಿದಾಡುತ್ತಿತ್ತು. ಆದರೆ, ಇದಕ್ಕೆ ಯಾವುದೇ ರೀತಿಯಲ್ಲೂ ವಿಜಯ್ ಅಥವಾ ತ್ರಿಷಾ ಆಗಲಿ, ಪ್ರತಿಕ್ರಿಯೆ ನೀಡಿಲ್ಲ. ಆದರೆ, ವಿಜಯ್ ಡಿವೋರ್ಸ್​ ಸುದ್ದಿ ಹೊರಬಿದ್ದಾಗಿನಿಂದ ನಟಿಯ ಹೆಸರು ಮತ್ತೆ ಜೋರಾಗಿ ಸದ್ದು ಮಾಡಲಾರಂಭಿಸಿದೆ. ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದ್ದು, ಅವರಿಬ್ಬರು ಮದುವೆ ಸಮಾರಂಭಕ್ಕೆ ಭೇಟಿ, ಜೊತೆಗೆ ನಿಂತು ತೆಗೆಸಿಕೊಂಡ ಫೋಟೋ ಕ್ಷಣ. ಇವು ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಯಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net