ಪ್ರಭಾಸ್ ಮೇಲೆ ರಶ್ಮಿಕಾಗೆ ಕ್ರಶ್; ಬಾಹುಬಲಿ ಜತೆಗೆ ಡೇಟಿಂಗ್ ಮಾಡುವಾಸೆ

IMG-20210527-WA0055
Published on

ರಶ್ಮಿಕಾ ಮಂದಣ್ಣಗೆ ಟಾಲಿವುಡ್ ನಟರೊಬ್ಬರ ಮೇಲೆ ಕ್ರಶ್ ಆಗಿದೆಯಂತೆ. ಆ ಸ್ಟಾರ್ ನಟ ಬಹುಶಃ ವಿಜಯ್ ದೇವರಕೊಂಡ ಆಗಿರಬಹುದು ಎಂದುಕೊಂಡರೆ ತಪು್ಪ. ರಶ್ಮಿಕಾಗೆ ಕ್ರಶ್ ಆಗಿರುವುದು ‘ಬಾಹುಬಲಿ’ ಪ್ರಭಾಸ್ ಮೇಲೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಟಾಲಿವುಡ್ ಹೀರೋ ಒಬ್ಬರ ಜತೆಗೆ ಡೇಟಿಂಗ್ ಮಾಡುವುದಕ್ಕೆ ಅವಕಾಶ ಸಿಕ್ಕರೆ, ಯಾರ ಜತೆಗೆ ಡೇಟಿಂಗ್​ಗೆ ಹೋಗುತ್ತೀರಾ? ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ ಎರಡನೆಯ ಯೋಚನೆಯೇ ಇಲ್ಲದೆ, ತಕ್ಷಣ ಪ್ರಭಾಸ್ ಅವರ ಹೆಸರನ್ನು ಹೇಳಿದ್ದಾರೆ ರಶ್ಮಿಕಾ. ತಾನು ಪ್ರಭಾಸ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಡೇಟಿಂಗ್​ಗೆ ಹೋಗುವುದಕ್ಕೆ ಅವಕಾಶ ಸಿಕ್ಕರೆ, ಖಂಡಿತಾ ಅವರ ಜತೆಗೆ ಹೋಗುವುದಾಗಿ ರಶ್ಮಿಕಾ ಹೇಳಿದ್ದಾರೆ.

ಹಾಗೆಯೇ, ಪ್ರಭಾಸ್ ಜತೆಗೆ ನಟಿಸುವುದಕ್ಕೆ ಅವಕಾಶ ಸಿಕ್ಕರೆ ಖಂಡಿತಾ ನಟಿಸುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ, ಪ್ರಭಾಸ್ ಜತೆಗೆ ರಶ್ಮಿಕಾ ನಟಿಸುವ ಸಾಧ್ಯತೆ ಇದೆ ಎಂದು ಒಂದೆರೆಡು ಬಾರಿ ಸುದ್ದಿಯಾಗಿತ್ತಾದರೂ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಇನ್ನಾದರೂ ಅದು ಸಾಧ್ಯವಾಗುತ್ತದಾ ಎಂಬುದನ್ನು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net