ನಾನು ದೇವದೂತನಲ್ಲ; ನಟ ಸೋನು ಸೂದ್

Sonu sood
Published on

ಬಾಲಿವುಡ್ ನಟ ಸೋನು ಸೂದ್, ಕೆಲವು ದಿನಗಳ ಹಿಂದಷ್ಟೇ ತಮ್ಮ ಲಾಕ್​ಡೌನ್ ಅನುಭವಗಳನ್ನು ಒಂದು ಪುಸ್ತಕರೂಪದಲ್ಲಿ ಹೊರತರುವುದಾಗಿ ಹೇಳಿಕೊಂಡಿದ್ದರು. ಆ ಪುಸ್ತಕಕ್ಕೆ ಇದೀಗ ‘ಐ ಆಮ್ ನಾಟ್ ಎ ಮೆಸೈ’ ಎಂಬ ಹೆಸರನ್ನು ಇಡಲಾಗಿದೆ. ಅಂದರೆ, ‘ನಾನು ದೇವದೂತನಲ್ಲ’ ಎಂದರ್ಥ.

ತಮ್ಮ ಪುಸ್ತಕದ ಬಗ್ಗೆ ಮಾತನಾಡುವ ಸೋನು, ‘ಕೆಲವರು ನನ್ನನ್ನು ಪ್ರೀತಿಯಿಂದ ‘ವಲಸೆ ಕಾರ್ವಿುಕರ ಪಾಲಿನ ದೇವದೂತ’ ಎಂದು ಕರೆದರು. ಆದರೆ, ನಾನು ನಿಜಕ್ಕೂ ದೇವದೂತನಲ್ಲ. ನನ್ನ ಹೃದಯ ಏನು ಹೇಳುತ್ತದೋ ನಾನದನ್ನು ಕೇಳುತ್ತೇನೆ. ಲಾಕ್​ಡೌನ್​ನಿಂದ ಸಾವಿರಾರು ಜನ ವಲಸೆ ಕಾರ್ವಿುಕರು ಸಂಕಷ್ಟದಲ್ಲಿದ್ದಾಗ, ಅವರಿಗೆ ಸಹಾಯ ಮಾಡಬೇಕು ಎಂದು ನನ್ನ ಮನಸ್ಸು ಹೇಳಿತು. ಮನುಷ್ಯರಾಗಿ ಅದು ನಮ್ಮ ಜವಾಬ್ದಾರಿ ಕೂಡಾ. ಅದೇ ಕಾರಣಕ್ಕೆ ನಾನು ಅವರಿಗೆ ಸಹಾಯ ಮಾಡಿದೆ. ಅದಕ್ಕೆ ನನ್ನನ್ನು ದೇವದೂತ ಎನ್ನುವುದು ದೊಡ್ಡ ಮಾತು’ ಎನ್ನುತ್ತಾರೆ. ‘ಐ ಆಮ್ ನೋ ಮೆಸೈ’ ಪುಸ್ತಕದ ಕೆಲಸಗಳು ಈಗಾಗಲೇ ಮುಗಿಯುತ್ತಾ ಬಂದಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿದೆ. (ಏಜನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net