ನನ್ನ ಬಯೋಪಿಕ್​ಗೆ ನಾನೇ ಹೀರೋ; ಸೋನು ಸೂದ್​ ಘೋಷಣೆ

Ullasa- sonu
Published on

ನವದೆಹಲಿ: ಲಾಕ್​ಡೌನ್ ಸಂದರ್ಭದಲ್ಲಿ ವಲಸೆ ಕಾರ್ವಿುಕರನ್ನು ತಮ್ಮ ಊರುಗಳಿಗೆ ತಲುಪಿಸುವ ಮೂಲಕ ಮನೆಮಾತಾದವರು ಸೋನು ಸೂದ್.

ಸಾವಿರಾರು ಕಾರ್ವಿುಕರಿಗೆ ಬಸ್​ಗಳ ಮೂಲಕ, ವಿಮಾನಗಳ ಮೂಲಕ ಮನೆ ತಲುಪಿಸಿದ ಸೋನು ತಮ್ಮ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹಿಡಿದಿಡುವುದಕ್ಕೆ ಪ್ರಯತ್ನ ಮಾಡುತ್ತಿರುವ ವಿಷಯ ಗೊತ್ತೇ ಇದೆ.

ಈ ಮಧ್ಯೆ, ಅವರ ಕುರಿತಾದ ಬಯೋಪಿಕ್ ನಿರ್ವಿುಸುವ ಪ್ರಯತ್ನಗಳೂ ಬಾಲಿವುಡ್​ನಲ್ಲಿ ಆಗುತ್ತಿವೆ ಎಂಬುದು ವಿಶೇಷ. ಈ ಕುರಿತು ಮಾತನಾಡಿರುವ ಅವರು, ‘ಈ ಬಗ್ಗೆ ನನಗಿಂಥ ಯಾರಿಗೆ ಹೆಚ್ಚು ಚೆನ್ನಾಗಿ ಗೊತ್ತಿರುವುದಕ್ಕೆ ಸಾಧ್ಯ ಹೇಳಿ? ಪ್ರತಿಯೊಂದು ಕ್ಷಣವನ್ನೂ ಜೀವಿಸಿದವನು ನಾನು. ಹಾಗಾಗಿ ಅದನ್ನೆಲ್ಲಾ ನನಗಿಂತ ಚೆನ್ನಾಗಿ ತೆರೆಯ ಮೇಲೆ ತರುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಬಯೋಪಿಕ್ ಆದರೆ, ನನ್ನ ಪಾತ್ರವನ್ನು ನಾನೇ ಮಾಡುತ್ತೇನೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net