ಆಗ ನನಗೆ 19 ವರ್ಷ... ಬಿಪಾಶಾರನ್ನೇ ಟ್ರೋಲ್​ ಮಾಡಿ ಕೊನೆಗೂ ಕ್ಷಮೆಯಾಚಿಸಿದ ಮೃನಾಲ್​ ಠಾಕೂರ್​! Mrunal Thakur

Mrunal Thakur
Published on

Mrunal Thakur : ನಟಿ ಮೃನಾಲ್​ ಠಾಕೂರ್​ ಬಗ್ಗೆ ವಿಶೇಷವಾಗಿ ಏನು ಹೇಳಬೇಕಿಲ್ಲ. ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸೀತಾ ರಾಮಂ ಸಿನಿಮಾ ಯಶಸ್ಸಿನ ಬಳಿಕ ಮೃನಾಲ್​ ಅವರ ಅದೃಷ್ಟವೇ ಬದಲಾಗಿದ್ದು, ನಾನಿ, ವಿಜಯ್​ ದೇವರಕೊಂಡ ಸೇರಿದಂತೆ ಅನೇಕ ಸ್ಟಾರ್​ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸ್ಟಾರ್​ ನಟಿಯರ ಸಾಲಿಗೆ ಮೃನಾಲ್​ ಸೇರಿಕೊಂಡಿದ್ದಾರೆ.

ತಾಜಾ ಸಂಗತಿ ಏನೆಂದರೆ, ಬಾಲಿವುಡ್ ನಟಿ ಬಿಪಾಶಾ ಬಸು ಬಗ್ಗೆ ನಟಿ ಮೃನಾಲ್ ಠಾಕೂರ್ ಅವರು ಈ ಹಿಂದೆ ಮಾಡಿದ್ದ ಕಾಮೆಂಟ್‌ಗಳು ತೀವ್ರ ಸಂಚಲನ ಮೂಡಿಸಿವೆ. ಬಿಪಾಶಾ ಬಸು ಅವರು ಪುರುಷನಂತೆ ಸ್ನಾಯುಗಳನ್ನು ಹೊಂದಿರುವ ಮಹಿಳೆ ಎಂದು ಮೃನಾಲ್​ ಹೇಳಿಕೆ ನೀಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿದೆ.

ಮೃನಾಲ್​ ಹೇಳಿದ್ದು ಯಾವಾಗ?

ಮೃನಾಲ್ ಠಾಕೂರ್ ಅವರು ತಮ್ಮ ಆರಂಭಿಕ ಟಿವಿ ವೃತ್ತಿಜೀವನದ ಸಂದರ್ಶನವೊಂದರಲ್ಲಿ ಬಿಪಾಶಾ ಬಸು ಅವರ ದೇಹದ ಬಗ್ಗೆ ಕಾಮೆಂಟ್ ಮಾಡಿದ್ದರು. ಕುಮ್ ಕುಮ್ ಭಾಗ್ಯ ಹೆಸರಿನ ಧಾರಾವಾಹಿಯ ಚಿತ್ರೀಕರಣದ ಸಂದರ್ಭದಲ್ಲಿ ಚಾಟ್ ಶೋ ಒಂದರಲ್ಲಿ ಮಾತನಾಡಿದ್ದ ಮೃನಾಲ್, ಬಿಪಾಶಾ ಬಸು ಪುರುಷನಂತೆ ಸ್ನಾಯುಗಳನ್ನು ಹೊಂದಿರುವ ಮಹಿಳೆ. ಬಿಪಾಶಾ ಬಸು ಅವರ ದೈಹಿಕ ರಚನೆ ‘ಮ್ಯಾನ್ಲಿ’ಯಾಗಿದೆ ಎಂದು ತಮಾಷೆಯಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಪರ-ವಿರೋಧ ಚರ್ಚೆಗೆ ಗ್ರಾಸವಾಯಿತು.

ಬಿಪಾಶಾ ತಿರುಗೇಟು

ಮೃನಾಲ್​ ಹೇಳಿಕೆಗೆ ನೆರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಬಿಪಾಶಾ ಬಸು ತಿರುಗೇಟು ನೀಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಶೇರ್​ ಮಾಡಿಕೊಂಡಿರುವ ಬಿಪಾಶಾ, ಬಲಿಷ್ಠ ಮಹಿಳೆಯರು ಇತರರ ಒಳಿತಿಗಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಎಲ್ಲ ಮಹಿಳೆಯರು ತುಂಬಾ ಬಲಿಷ್ಠರಾಗಿರಬೇಕು. ಆಗ ಮಾತ್ರ ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಠರಾಗುತ್ತಾರೆ ಎಂದು ಬಿಪಾಶಾ ಹೇಳಿದರು. ಮಹಿಳೆಯರು ಬಲಿಷ್ಠರಾಗಿರಬಾರದು ಎಂದು ಹೇಳುವ ಹಳೆಯ ವಿಚಾರಗಳು ಮತ್ತು ಸಂಪ್ರದಾಯಗಳಿಂದ ಹೊರಬರಬೇಕು ಎಂದು ಬಿಪಾಶಾ ಪೋಸ್ಟ್ ಮಾಡಿದ್ದಾರೆ.

Bipasa 1

ಕ್ಷಮೆಯಾಚಿಸಿದ ಮೃನಾಲ್​

ಯಾವಾಗ ವಿಡಿಯೋ ವೈರಲ್​ ಆಯಿತೋ ಆಗ ಕೆಲವರು ಇದು ‘ಬಾಡಿ ಶೇಮಿಂಗ್’ ಎಂದು ಮೃನಾಲ್​ ಅವರನ್ನು ಟೀಕಿಸಿದ್ದಾರೆ. ಇದರ ಬೆನ್ನಲ್ಲೇ ವಿವಾದಕ್ಕೆ ಪ್ರತಿಕ್ರಿಯಿಸಿರುವ ಮೃನಾಲ್, ಮೊದಲಿಗೆ ಬಿಪಾಶ ಬಳಿ ಕ್ಷಮೆಯಾಚಿಸಿದ್ದಾರೆ. 19 ವರ್ಷದ ಹದಿಹರೆಯದವಳಾಗಿದ್ದ ಸಂದರ್ಭದಲ್ಲಿ ನಾನು ಅನೇಕ ಅಸಂಬದ್ಧ ಮಾತುಗಳನ್ನು ಆಡಿದ್ದೆ. ನನ್ನ ಮಾತಿನ ಭಾರ ಅಥವಾ ತಮಾಷೆಯಲ್ಲಿಯೂ ಸಹ ಎಷ್ಟು ಪದಗಳು ನೋವುಂಟುಮಾಡಬಹುದು ಎಂಬುದನ್ನು ನಾನು ಯಾವಾಗಲೂ ಅರ್ಥಮಾಡಿಕೊಳ್ಳುತ್ತಿರಲಿಲ್ಲ. ಆದರೆ, ಅದು ಅನೇಕರಿಗೆ ಮನಸ್ಸಿಗೆ ನೋವು ಮಾಡಿದೆ ಮತ್ತು ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಯಾರನ್ನೂ ಬಾಡಿ ಶೇಮಿಂಗ್​ಗೆ ಒಳಪಡಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಸಂದರ್ಶನವೊಂದರಲ್ಲಿ ಅದು ಹಾಸ್ಯವಾಗಿತ್ತು. ಈಗ ಇದು ಹೇಗೆ ಬಂತು ಎಂದು ನನಗೆ ಅರ್ಥವಾಗಿದೆ ಮತ್ತು ಆ ಸಂದರ್ಭದಲ್ಲಿ ನಿಜವಾಗಿಯೂ ನನ್ನ ಪದಗಳನ್ನು ನಾನು ಭಿನ್ನವಾಗಿ ಆರಿಸಿಕೊಂಡಿದ್ದೆ. ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ ಎಂದು ಮೃನಾಲ್​ ಹೇಳಿದ್ದಾರೆ. ಆದರೆ, ಎಲ್ಲಿಯೂ ಬಿಪಾಶಾ ಅವರ ಹೆಸರನ್ನು ಉಲ್ಲೇಖಿಸದಿದ್ದಕ್ಕೆ ಮೃನಾಲ್​ ವಿರುದ್ಧ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ಮೃನಾಲ್​ ಬೆಂಬಲಕ್ಕೆ ನಿಂತಿದ್ದಾರೆ.

Mrunal Thakur 1

ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಕಪ್ಪು ಉಡುಪಿನ ಫೋಟೋವೊಂದನ್ನು ಹಂಚಿಕೊಂಡಿರುವ ಮೃನಾಲ್​, ನೋಡುವುದನ್ನು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ. ಇದನ್ನು ಟ್ರೋಲ್‌ಗಳಿಗೆ ಪರೋಕ್ಷ ಉತ್ತರವೆಂದು ಭಾವಿಸಲಾಗಿದೆ. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮೃನಾಲ್‌ರ ಆತ್ಮವಿಶ್ವಾಸವನ್ನು ಶ್ಲಾಘಿಸಿದರೆ, ಇನ್ನು ಕೆಲವರು ಆಕೆಯ ಹೇಳಿಕೆಯನ್ನು ಟೀಕಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net