‘ಜಾಕಿ 42’ನಲ್ಲಿ ಹೃತಿಕಾ : ‘ರಾನಿ’ ನಟ ಕಿರಣ್ ರಾಜ್‌ಗೆ ನಾಯಕಿಯಾದ ‘ಔಟ್ ಆಫ್​ ಸಿಲಬಸ್’ ನಟಿ

hrutjhika 1
Published on

ಬೆಂಗಳೂರು: ನಟಿ ಹೃತಿಕಾ ಶ್ರೀನಿವಾಸ್ ಕಳೆದ ವರ್ಷ ಕನ್ನಡದ ‘ಆರಾಮ್ ಅರವಿಂದ ಸ್ವಾಮಿ’, ‘ಔಟ್ ಆಫ್​ ಸಿಲೆಬೆಸ್’ ಚಿತ್ರಗಳ ಮೂಲಕ ಭರವಸೆ ಮೂಡಿಸಿದ್ದರು. ಸದ್ಯ ತೆಲುಗಿನಲ್ಲೂ ಬಿಜಿಯಿರುವ ಅವರು, ಇದೀಗ ಕನ್ನಡದ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ‘ರಾನಿ’ ಬಳಿಕ ನಟ ಕಿರಣ್ ರಾಜ್ ಮತ್ತು ನಿರ್ದೇಶಕ ಗುರುತೇಜ್ ಶೆಟ್ಟಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಜಾಕಿ 42’ ಚಿತ್ರಕ್ಕೆ ಹೃತಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕುದುರೆ ರೇಸ್ ಸುತ್ತ ಸುತ್ತುವ ಈ ಕಥೆಯಲ್ಲಿ ಕಿರಣ್ ರಾಜ್, ಕುದುರೆ ಸವಾರನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರು ಸುತ್ತಮುತ್ತ ಶೂಟಿಂಗ್ ಸಾಗಿದ್ದು, ಹಾರ್ಸ್ ರೇಸ್ ಭಾಗದ ಶೂಟಿಂಗ್ ನಡೆಸಲಾಗುತ್ತಿದೆ. ಚಿತ್ರದಲ್ಲಿ ಹೃತಿಕಾ ಹೋಮ್ಲಿ ಮತ್ತು ಮಾಡರ್ನ್ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅವರು ತೆಲುಗು ಚಿತ್ರದಲ್ಲಿ ಬಿಜಿಯಿದ್ದು, ಆ ಚಿತ್ರದ ಶೆಡ್ಯೂಲ್ ಮುಗಿದ ಬಳಿಕ ‘ಜಾಕಿ 42’ ತಂಡ ಸೇರಿಕೊಳ್ಳಲಿದ್ದಾರೆ. ಉಳಿದಂತೆ ಚಿತ್ರಕ್ಕೆ ವಿನೋದ್ ಯಜಮಾನಿ ಸಂಗೀತವಿರಲಿದೆ. ಸದ್ಯದಲ್ಲೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ತಂಡ ಯೋಜಿಸುತ್ತಿದೆ. ಇದಲ್ಲದೇ ಅಭಿಷೇಕ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ, ಹೃತಿಕಾ ನಾಯಕಿಯಾಗಿರುವ ‘ನಮ್ ಗಣಿ ಬಿ.ಕಾಂ ಪಾಸ್-2’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net