ಗ್ಯಾಂಗ್​ಸ್ಟರ್ ವೇದನಾಗಿ ಹೃತಿಕ್ ರೋಶನ್; ಬರ್ತ್​ಡೇಗೆ ಬಂತು ಖಡಕ್ ಲುಕ್

Hrithik
Published on

ತಮಿಳಿನ ಕ್ಲಾಸಿಕ್ ಸಿನಿಮಾಗಳಲ್ಲೊಂದಾದ ‘ವಿಕ್ರಂ ವೇದ’ ಚಿತ್ರ ಹಿಂದಿಗೆ ರಿಮೇಕ್ ಆಗಲಿದೆ ಎಂದಾಗಲೇ ಒಂದು ಕುತೂಹಲವಿತ್ತು. ಅದಾದ ಬಳಿಕ ಮೂಲ ಚಿತ್ರದಲ್ಲಿನ ಆರ್. ಮಾಧವನ್, ವಿಜಯ್ ಸೇತುಪತಿ ಪಾತ್ರವನ್ನು ಸೈಫ್ ಅಲಿ ಖಾನ್ ಮತ್ತು ಹೃತಿಕ್ ರೋಶನ್ ಮಾಡಲಿದ್ದಾರೆ ಎಂದಾಗ ನಿರೀಕ್ಷೆಗಳು ಆಕಾಶ ಮುಟ್ಟಿದ್ದವು. ಆದರೆ, ಇಬ್ಬರ ಲುಕ್ ಹೇಗಿರಲಿದೆ ಎಂಬುದಕ್ಕೆ ಇಲ್ಲಿಯವರೆಗೂ ಯಾವುದೇ ಫೋಟೋ ಪುರಾವೆ ಸಿಕ್ಕಿರಲಿಲ್ಲ. ಇದೀಗ ಹೃತಿಕ್ 48ನೇ ಜನ್ಮದಿನದ ಪ್ರಯುಕ್ತ ‘ವಿಕ್ರಂ ವೇದ’ ಚಿತ್ರದ ವೇದ ಲುಕ್ ಬಹಿರಂಗವಾಗಿದೆ. ಹೃತಿಕ್ ಖಡಕ್ ಅವತಾರದಲ್ಲಿ ಎದುರಾಗಿ ಅಭಿಮಾನಿಗಳಿಗೆ ಸರ್ಪ್ರೖೆಸ್ ನೀಡಿದ್ದಾರೆ.

ಮೂಲ ತಮಿಳಿನ ‘ವಿಕ್ರಂ ವೇದ’ ಸಿನಿಮಾ ನಿರ್ದೇಶನ ಮಾಡಿದ್ದ ಗಾಯತ್ರಿ-ಪುಷ್ಕರ್ ಜೋಡಿ ಹಿಂದಿ ರಿಮೇಕ್​ಗೂ ಆಕ್ಷನ್-ಕಟ್ ಹೇಳುತ್ತಿದೆ. ಪೊಲೀಸ್ ಮತ್ತು ಗ್ಯಾಂಗ್​ಸ್ಟರ್ ನಡುವಿನ ಕ್ರೖೆಂ ಥ್ರಿಲ್ಲರ್ ಚಿತ್ರದಲ್ಲಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಚಿತ್ರದ ಅರ್ಧ ಚಿತ್ರೀಕರಣ ಮುಗಿದಿದೆ. ಈ ಸಿನಿಮಾ ಹೊರತುಪಡಿಸಿ ‘ಫೈಟರ್’ ಚಿತ್ರದಲ್ಲಿಯೂ ಹೃತಿಕ್ ನಟಿಸುತ್ತಿದ್ದು, ದೀಪಿಕಾ ಪಡುಕೋಣೆ ಅವರಿಗೆ ಜೋಡಿಯಾಗಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net