ಆ್ಯಕ್ಷನ್​-ಕಟ್ ಹೇಳಲು ರೆಡಿಯಾದ ಹೃತಿಕ್​ ರೋಷನ್​ ; ಕ್ರಿಷ್​ 4ಗೆ ನಟನೇ ನಿರ್ದೇಶಕ

zxv
Published on

ಬಾಲಿವುಡ್​ನ ಯಶಸ್ವೀ ಸಿನಿಮಾ ಸರಣಿಗಳ ಸಾಲಿನಲ್ಲಿ ಹೃತಿಕ್​ ರೋಷನ್​ ಅಭಿನಯದ, ಅವರ ತಂದೆ ರಾಕೇಶ್​ ರೋಷನ್​ ನಿರ್ದೇಶಿಸಿದ್ದ "ಕ್ರಿಷ್​' ಸರಣಿ ಮೊದಲು ನಿಲ್ಲುತ್ತದೆ. 2003ರಲ್ಲಿ "ಕೋಯಿ ಮಿಲ್​ ಗಯಾ' ಬಿಡುಗಡೆಯಾಗಿ ಹೊಸ ಸೂಪರ್​ಹೀರೋಅನ್ನು ಪ್ರೇಕ್ಷಕರಿಗೆ ಪರಿಚಯಿಸಿತ್ತು. ನಂತರ 2006ರಲ್ಲಿ "ಕ್ರಿಷ್​' ತೆರೆಗೆ ಬಂದು ಸಕ್ಸಸ್​ಫುುಲ್​ ಸರಣಿ ಪ್ರಾರಂಭಿಸಿತ್ತು. ನಂತರ 2013ರಲ್ಲಿ "ಕ್ರಿಷ್​ 3' ರಿಲೀಸ್​ ಆಗಿ, ಈ ಸರಣಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತ್ತು. ಒಟ್ಟು 160 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ಈ ಮೂರು ಚಿತ್ರಗಳು ಬಾಕ್ಸಾಫಿಸಿನಲ್ಲಿ 550 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿಕೊಂಡಿದ್ದವು.

ಕಳೆದ ಕೆಲ ವರ್ಷಗಳಿಂದ "ಕ್ರಿಷ್​ 4' ಬಗ್ಗೆ ಆಗೊಮ್ಮೆ ಈಗೊಮ್ಮೆ ಸುದ್ದಿಗಳಾಗುತ್ತಿದ್ದರೂ, ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಇದೀಗ ರಾಕೇಶ್​ ರೋಷನ್​ "ಕ್ರಿಷ್​ 4' ಬಗ್ಗೆ ಬಿಗ್​ ಅಪ್​ಡೇಟ್​ ನೀಡಿದ್ದಾರೆ. ವಿಶೇಷ ಅಂದರೆ ಈ ಚಿತ್ರದ ಮೂಲಕ ನಟ ಹೃತಿಕ್​ ರೋಷನ್​ ಡೈರೆಕ್ಟರ್​ ಕ್ಯಾಪ್​ ಧರಿಸಲಿದ್ದಾರೆ.

ಜಾಲತಾಣದಲ್ಲಿ ಹೃತಿಕ್​ ಜತೆಗಿರುವ ಫೋಟೋ ಹಂಚಿಕೊಂಡು, "25 ವರ್ಷಗಳ ಹಿಂದೆ ನಿನ್ನನ್ನು ನಟನಾಗಿ ಲಾಂಚ್​ ಮಾಡಿದ್ದೆ. ಇದೀಗ 25 ವರ್ಷಗಳ ನಂತರ ಮತ್ತೆ ನಿನ್ನನ್ನು ನಿರ್ದೇಶಕನನ್ನಾಗಿ ಲಾಂಚ್​ ಮಾಡುತ್ತಿದ್ದೇನೆ. ನಾನು, ಆದಿತ್ಯ ಚೋಪ್ರಾ ಜತೆ ನಿರ್ಮಾಪಕನಾಗಿ ನಿಂತು ನಮ್ಮ ಈ ಮಹಾತ್ವಾಕಾಂೆಯ ಸರಣಿಯನ್ನು ಮುಂದುವರಿಸುತ್ತಿರುವುದು ಖುಷಿ ನೀಡಿದೆ' ಎಂದು ಸಂತಸ ಹಂಚಿಕೊಂಡಿದ್ದಾರೆ ರಾಕೇಶ್​. ಮೂಲಗಳ ಪ್ರಕಾರ "ಕ್ರಿಷ್​ 4' ಸದ್ಯ ಪ್ರಿ&ಪ್ರೊಡಕ್ಷನ್​ ಹಂತದಲ್ಲಿದ್ದು, 2026ರಲ್ಲಿ ಸೆಟ್ಟೇರಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net