ಹೊಯ್ಸಳ ಪ್ರಾರಂಭ: ಧನಂಜಯ್​ಗೆ ನಾಯಕಿಯಾದ ಅಮೃತಾ

Amrutha Ayyangar
Published on

ಬೆಂಗಳೂರು: ಧನಂಜಯ್ ಅಭಿನಯದ ‘ಹೊಯ್ಸಳ’ ಕೆಲವು ತಿಂಗಳ ಹಿಂದೆಯೇ ಘೋಷಣೆಯಾಗಿತ್ತು. ಏಪ್ರಿಲ್​ನಲ್ಲಿ ಚಿತ್ರ ಪ್ರಾರಂಭ ಎಂದು ಹೇಳಲಾಗಿತ್ತು. ಅದರಂತೆ ಗುರುವಾರ ಚಿತ್ರವು ಸರಳ ಪೂಜೆಯೊಂದಿಗೆ ಪ್ರಾರಂಭವಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ವಿಶೇಷವೆಂದರೆ, ಈ ಚಿತ್ರಕ್ಕೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಆಯ್ಕೆಯಾಗಿದ್ದಾರೆ.

ಧನಂಜಯ್ ಮತ್ತು ಅಮೃತಾ ‘ಪಾಪ್​ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ಮೊದಲ ಬಾರಿಗೆ ಜತೆಯಾಗಿ ನಟಿಸಿದರು. ‘ಬಡವ ರಾಸ್ಕಲ್’ನಲ್ಲಿ ಈ ಜೋಡಿ ರಿಪೀಟ್ ಆಯಿತು. ಈಗ ಮೂರನೆಯ ಬಾರಿಗೆ ‘ಹೊಯ್ಸಳ’ದಲ್ಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಹೊಯ್ಸಳ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿರುವುದು ವಿಜಯ್ ನಾಗೇಂದ್ರ. ಈ ಹಿಂದೆ ಗಣೇಶ್ ಅಭಿನಯದ ‘ಗೀತಾ’ ನಿರ್ದೇಶಿಸಿದ್ದ ವಿಜಯ್ಗೆ ಇದು ಎರಡನೇ ಚಿತ್ರ. ಇನ್ನು, ಕೆಆರ್​ಜಿ ಸ್ಟುಡಿಯೋಸ್​ನಡಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ವಿುಸುತ್ತಿದ್ದಾರೆ. ಬೆಳಗಾವಿಯಲ್ಲಿ ಚಿತ್ರೀಕರಣ ನಡೆಯಲಿದ್ದು, ನವೆಂಬರ್ ಒಂದರಂದು ಚಿತ್ರ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net