ತಮ್ಮ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Pooja Hegde - Final
Pooja Hegde
Published on

ಬೆಂಗಳೂರು: ಕಾಲಿವುಡ್ ನಟ ದಳಪತಿ ವಿಜಯ್ 65ನೇ ಸಿನಿಮಾದ ಕೆಲಸಗಳು ವೇಗಪಡೆದುಕೊಂಡಿವೆ. ಇನ್ನೇನು ಶೀಘ್ರದಲ್ಲಿ ಅಧಿಕೃತ ಘೋಷಣೆ ಮಾಡಿ, ಶೂಟಿಂಗ್​ಗೆ ತೆರೆಳಲು ತಂಡ ಪ್ಲಾನ್ ಮಾಡಿದೆ. ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುವುದು ಈಗಾಗಲೇ ಅಧಿಕೃತವಾಗಿತ್ತು. ಆದರೆ, ಪೂಜಾ ಈ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಎಂಬ ವಿಷಯ ಮಾತ್ರ ಬಹಿರಂಗವಾಗಿರಲಿಲ್ಲ.

ವಿಜಯ್ಗೆ ನಾಯಕಿಯಾಗುವುದಕ್ಕೆ ಬರೋಬ್ಬರಿ 3.5 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರಂತೆ! ಹೌದು, ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಾಯಕರ ಜತೆಗೆ ನಾಯಕಿಯರ ಸಂಬಳವೂ ಏರಿಕೆ ಕಾಣುತ್ತಿದೆ. ಅದರಲ್ಲೂ ಸಾಲುಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಸಹ ಒಂದು ಸಿನಿಮಾಕ್ಕೆ ಎರಡು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ‘ಅದೆಲ್ಲ ಸುಳ್ಳು. ಆ ಕ್ಷಣಕ್ಕೆ ಈಗಲೂ ನಾನು ಕಾಯುತ್ತಿದ್ದೇನೆ’ ಎಂದು ಸ್ವತಃ ರಶ್ಮಿಕಾ ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಆ ವಿಷಯವನ್ನು ಅಲ್ಲಗೆಳೆದಿದ್ದರು.

ಇದೀಗ ಪೂಜಾ ಹೆಗ್ಡೆ ಸರದಿ. ಬಾಲಿವುಡ್ ಸೇರಿ ದಕ್ಷಿಣದ ತೆಲುಗು, ತಮಿಳಿನಲ್ಲಿ ಪೂಜಾ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಆ ಜನಪ್ರಿಯತೆಗೆ ಇಷ್ಟೊಂದು ಮೊತ್ತ ಪಡೆದಿದ್ದಾರೆ ಎಂಬ ಮಾತು ಕೇಳಿಬಂದಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಬಹುಕೋಟಿ ವೆಚ್ಚದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಸನ್ ನೆಟ್​ವರ್ಕ್ ಸಂಸ್ಥೆ ಈ ಚಿತ್ರಕ್ಕೂ ಬಂಡವಾಳ ಹೂಡುತ್ತಿದೆ. ಸದ್ಯ ತೆಲುಗಿನ ‘ರಾಧೆ ಶ್ಯಾಮ್ ಮತ್ತು ‘ಆಚಾರ್ಯ,’ ಹಿಂದಿಯ ‘ಸರ್ಕಸ್’ ಸಿನಿಮಾಗಳಲ್ಲಿ ಪೂಜಾ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರಗಳಲ್ಲಿ ತಮ್ಮ ಕೆಲಸ ಮುಗಿಸಿ, ವಿಜಯ್ ಚಿತ್ರದಲ್ಲಿ ನಟಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net