#bhajarangi2 first look ಹೇಗಿದೆ?- ಶಿವರಾಜ್​ ಕುಮಾರ್ ಪ್ರಶ್ನೆ ಹುಟ್ಟಿಸಿದೆ, ಕುತೂಹಲ ಮತ್ತು ನಿರೀಕ್ಷೆ!

Bhajarangi 2 N 15 JAN 20
Published on

ಬೆಂಗಳೂರು: ನಟ ಶಿವರಾಜ್ ಕುಮಾರ್ ಅಭಿನಯದ #ಭಜರಂಗಿ2 ಚಿತ್ರದ ಫಸ್ಟ್​ ಲುಕ್​ ಸಂಕ್ರಾಂತಿ ಹಬ್ಬದ ಮುನ್ನಾ ದಿನ ಪೋಸ್ಟರ್ ಮೂಲಕ ಬಹಿರಂಗವಾಗಿದೆ.

ಶಿವರಾಜ್ ಕುಮಾರ್ ಅವರು ಈ ಪೋಸ್ಟರನ್ನು ಟ್ವೀಟ್ ಮಾಡಿದ್ದು, ಫಸ್ಟ್​ ಲುಕ್​ ಹೇಗಿದೆ ಎಂಬ ಪ್ರಶ್ನೆಯನ್ನು ಕನ್ನಡಿಗರ ಮುಂದಿಟ್ಟಿದ್ದಾರೆ.

ಎ.ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ನಿರ್ಮಾಪಕರು. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಇನ್ನು ಉಳಿದಂತೆ ಕಲಾವಿದರ ವಿಚಾರವನ್ನು ಚಿತ್ರ ತಂಡ ಇನ್ನೂ ಬಹಿರಂಗಗೊಳಿಸಿಲ್ಲ. ಪೋಸ್ಟರ್​ ನಲ್ಲಿ ಶಿವರಾಜ್​ ಕುಮಾರ್ ಅವರ ಲುಕ್​ ಎದ್ದು ಕಾಣುತ್ತಿದ್ದು, ಅವರ ಮುಖದ ಎದುರು ಚಾಣಕ್ಯನ ರೂಪವಿದ್ದು, ಅನೇಕ ಪ್ರಶ್ನೆಗಳನ್ನು ಮೂಡಿಸಿದೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net