ಜೊತೆ ಜೊತೆಯಲಿ ಧಾರಾವಾಹಿಯ ಸಹನಟನಿಗೆ ಮನೆ ಮಾಲೀಕನಿಂದ ಹಲ್ಲೆ

Serial Actor
Published on

ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿಯ ಸಹನಟನಿಗೆ ಮನೆ ಮಾಲೀಕ ಬಾಡಿಗೆ ನೀಡುವಂತೆ ಒತ್ತಾಯಿಸಿ ತೊಂದರೆ ನೀಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಬಾಡಿಗೆ ಕೊಡು ಇಲ್ಲವೇ ಜಾಗ ಖಾಲಿ ಮಾಡು ಎಂದು ಸಹನಟ ಪ್ರಶಾಂತ್​ಗೆ ಟಾರ್ಚರ್​ ನೀಡಿದ್ದು, ಅವರ ಮೇಲೆ ಮನೆ ಮಾಲೀಕ ಹಲ್ಲೆ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಮಾಲೀಕನೊಂದಿಗೆ ಅವರ ಸಹೋದರಿಯು ಸಹ ಬಾಯಿಗೆ ಬಂದಂತೆ ಪ್ರಶಾಂತ್​ ಕುಟುಂಬವನ್ನು ಬೈದಿದ್ದಾರೆ. ಇದನ್ನೂ ಓದಿ: ಕೇಜಿಗಟ್ಟಲೆ ಚಿನ್ನ, ಬೆಳ್ಳಿ, ಸೈಟು, ಫ್ಲ್ಯಾಟು, ಮನೆಗಳು… ಬ್ರಹ್ಮಾಂಡ ಭ್ರಷ್ಟಾಚಾರ ಬಯಲು

ಕರೊನಾ ವೈರಸ್ ಲಾಕ್​ಡೌನ್​​ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳು ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಇದೀಗ ಚೇತರಿಕೆ ಕಾಣುತ್ತಿದೆ. ಲಾಕ್​ಡೌನ್‌ ಹಿನ್ನೆಲೆಯಲ್ಲಿ ಬಾಡಿಗೆ ಒತ್ತಡ ಹೇರಬಾರದೆಂದು ಸರ್ಕಾರ ಹೇಳಿದ್ದರೂ, ಮಾಲೀಕ ಅತಿರೇಕ ವರ್ತನೆ ತೋರಿದ್ದಾರೆ.

ಪ್ರಶಾಂತ್​ ಮನೆಯಲ್ಲಿ ಪತ್ನಿ ಹಾಗೂ ಮಗು ಸಹ ಇದೆ. ಇದೀಗ ಭಯದಿಂದ ಇರಬೇಕಾದ ಪರಿಸ್ಥಿತಿ ಸಹನಟ ಪ್ರಶಾಂತ್​ಗೆ ಎದುರಾಗಿದೆ. ಸಿನಿಕಾರ್ಮಿಕರ ಮೇಲೂ ಲಾಕ್​ಡೌನ್ ಪರಿಣಾಮ ಬೀರಿದ್ದು, ಇತ್ತೀಚಿಗಷ್ಟೇ ಕಿರುತೆರೆ ಶೂಟಿಂಗ್ ಶುರುವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net