ಹಾರರ್​ ಟೆಡ್ಡಿ ಬೇರ್​

Teddy bare
Published on

ಬೆಂಗಳೂರು: ಹಾರರ್​ ಥ್ರಿಲ್ಲರ್​ ಶೈಲಿಯ "ಟೆಡ್ಡಿ ಬೇರ್​' ಸಿನಿಮಾದ ಹಾಡುಗಳು ಬಿಡುಗಡೆಯಾಗಿದ್ದು, ಇನ್ನೇನು ಚಿತ್ರಮಂದಿರಗಳ ಬಾಗಿಲು ತೆರೆದರೆ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ. ನವ ದಂಪತಿ ಹೊಸ ಮನೆ ಪ್ರವೇಶ ಪಡೆದಾಗ ಅಲ್ಲಿ ಎದುರಾಗುವ ವಿಚಿತ್ರ ಟನಾವಳಿಗಳೇ ಈ ಸಿನಿಮಾದ ಕಥಾಹಂದರ.

ಇತ್ತೀಚೆಗೆ ನಡೆದ ಈ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್​ ಆಗಮಿಸಿ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಬಾಮ ಹರೀಶ್​, ಉಮೇಶ್​ ಬಣಕಾರ್​ ಸಹ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. "ಟೆಡ್ಡಿ ಬೇರ್​' ಚಿತ್ರಕ್ಕೆ ಲೋಕೇಶ್​ ಬಿ ಆ್ಯಕ್ಷನ್​ ಕಟ್​ ಹೇಳಿದ್ದು, ಶೇ. 80ರಷ್ಟು ಭಾಗದ ಶೂಟಿಂಗ್​ ಮುಕ್ತಾಯವಾಗಿದೆ. ಭಾರ್ಗವ್​ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಲಿಖಿತಾ ಮತ್ತು ಶೈಲಜಾ ಸಿಂಹ ನಾಯಕಿಯರಾಗಿದ್ದಾರೆ. ಆರೋನ್​ ಕಾರ್ತಿಕ್​ ಸಂಗೀತ, ಕೃಷ್ಣ ಸಾರಥಿ ಛಾಯಾಗ್ರಹಣ ಮಾಡಿರುವ ಈ ಚಿತ್ರ ಆದ್ಯಲಕ್ಷಿ$್ಮ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ನಿರ್ಮಾಣವಾಗಿದೆ. ಸಿರಿ ಮ್ಯೂಸಿಕ್​ನಲ್ಲಿ ಹಾಡುಗಳು ಬಿಡುಗಡೆ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net