

ಚಿತ್ರ ಪ್ರದರ್ಶನ ಯಾವಾಗಿನಿಂದ ಪ್ರಾರಂಭವಾಗುತ್ತದೋ ಗೊತ್ತಿಲ್ಲ. ಆದರೆ, ಸೆನ್ಸಾರ್ ಆಗಿ ಬಿಡುಗಡೆಯಾಗಲಿರುವ ಸಿನಿಮಾಗಳ ದೊಡ್ಡ ಕ್ಯೂ ಈಗಾಗಲೇ ಇದೆ. ಈ ಸಿನಿಮಾಗಳ ಜತೆಗೆ ಹೊಸ ಸೇರ್ಪಡೆ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಕಾರಣಾಂತರಗಳಿಂದ ಚಿತ್ರ ತಡವಾಗಿ, ಇದೀಗ ಸೆನ್ಸಾರ್ ಆಗಿದೆ. ಇನ್ನು ಪ್ರದರ್ಶನ ಪ್ರಾರಂಭವಾಗುತ್ತಿದ್ದಂತೆಯೇ, ಚಿತ್ರ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸಿದೆ.
‘ಹೋಮ್ ಮಿನಿಸ್ಟರ್’ ಚಿತ್ರದಲ್ಲಿ ಉಪೇಂದ್ರ ಜತೆಗೆ ವೇದಿಕಾ, ತಾನ್ಯಾ ಹೋಪ್, ಸುಮನ್ ರಂಗನಾಥ್ ಮುಂತಾದವರು ನಟಿಸಿದ್ದಾರೆ. ಹೆಸರು ಕೇಳಿದರೆ ಇದೊಂದು ರಾಜಕೀಯ ಚಿತ್ರ ಎಂದನಿಸಬಹುದು. ಆದರೆ, ಈ ಚಿತ್ರದಲ್ಲಿ ಬೇರೇನೋ ಇದೆ ಎನ್ನುತ್ತಾರೆ ನಿರ್ದೇಶಕ ಶ್ರೀಹರಿ.