

ಅತ್ಯುತ್ತಮ ಸಿನಿಮಾ ಆಸ್ಕರ್ ಪ್ರಶಸ್ತಿ ಗೆದ್ದಿದ್ದ "ಶೇಕ್ಸ್ಪಿಯರ್ ಇನ್ ಲವ್' ಸೇರಿ "ಮಲೆನಾ', "ಗ್ಯಾಂಗ್ಸ್ ಆ್ ನ್ಯೂ ಯಾರ್ಕ್' ಮತ್ತು ಹಲವು ಹಾಲಿವುಡ್ ಚಿತ್ರಗಳು, ಟಿವಿ ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತಿ ನಿರ್ಮಾಪಕ ಹಾರ್ವೇ ವೀನ್ಸ್ಟೀನ್ಗೆ ಸಲ್ಲುತ್ತದೆ. ಇಂತಹ ಹಾರ್ವೇ ವಿರುದ್ಧ ಹಲವಾರು ನಟಿಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. 2018ರಲ್ಲಿ ಮೂರು ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದ್ದು, ಸದ್ಯ ಹಾರ್ವೇ 16 ವರ್ಷಗಳ ಕಾರಾಗೃಹ ಶಿಕ್ಷೆಯಾಗಿತ್ತು.
ಆಗ ಹಾಲಿವುಡ್ನಲ್ಲಿ "ಮೀಟೂ' ಕ್ಯಾಂಪೇನ್ ಆರಂಭವಾಗಿ, ಭಾರತದಲ್ಲೂ ಹಲವು ನಟಿಯರು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು. ಇದೀಗ ಹಾರ್ವೇ ಪ್ರಕರಣ ನಡೆದ ಆರು ವರ್ಷಗಳ ಬಳಿಕ ಮತ್ತೊಬ್ಬ ಹಾಲಿವುಡ್ ಸ್ಟಾರ್ ಶಾನ್ ಡಿಡ್ಡಿ ಕೂಂಬ್ಸ್ ಹೆಸರು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಕೇಳಿಬಂದಿದೆ. ಕಳೆದ ಕೆಲ ದಿನಗಳಲ್ಲಿ ಆತನ ವಿರುದ್ಧ 11 ಪ್ರಕರಣಗಳು ದಾಖಲಾಗಿದ್ದು, ಪಾರ್ಟಿ ಹೆಸರಿನಲ್ಲಿ ಶಾನ್ ನಡೆಸುತ್ತಿದ್ದ ಕರಾಳ ದಂಧೆಯ ಹಂತ ಹಂತವಾಗಿ ಬಹಿರಂಗಗೊಂಡಿದೆ. ಲೈಂಗಿಕ ದೌರ್ಜನ್ಯ, ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಇದೇ ತಿಂಗಳ 16ರಂದು ಡಿಡ್ಡಿ ಕೂಂಬ್ಸ್ಅನ್ನು ಬಂಧಿಸಲಾಗಿದೆ.
ಪಾರ್ಟಿ ಹೆಸರಲ್ಲಿ ದಂಧೆ
ಮೂಲಗಳ ಪ್ರಕಾರ ಹಾಲಿವುಡ್ ಸೆಲೆಬ್ರಿಟಿಗಳು, ರ್ಯಾಪರ್ಗಳು ಸೇರಿ ಹೈಪ್ರೊೈಲ್ ಗೆಸ್ಟ್ಗಳಿಗಾಗಿ ಗೌಪ್ಯ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಡಿಡ್ಡಿ, ಅಲ್ಲಿ ಎಲ್ಲ ಬಗೆಯ ಮಾದಕ ವಸ್ತುಗಳು ಹಾಗೂ ವೇಶ್ಯೆಯರನ್ನು ಪೂರೈಸುತ್ತಿದ್ದ ಎನ್ನಲಾಗಿದೆ. ಕೆಲ ತಾರೆಯರ ಜತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಅದರ ೋಟೋ ಮತ್ತು ವಿಡಿಯೋ ಮಾಡಿಕೊಂಡು, ಅವರನ್ನು ಬೆದರಿಸುತ್ತಿದ್ದ ಎನ್ನಲಾಗಿದೆ.