

ಒಂದೊಂದು ಪಾತ್ರಕ್ಕೆ ಒಂದೊಂದು ರೀತಿಯ ಸಿದ್ಧತೆ ಬೇಕಾಗುತ್ತದೆ. ಕೆಲವೊಮ್ಮೆ ಕಲಾವಿದರೇ ಆಯಾ ಪಾತ್ರಕ್ಕೆ ಬೇಕಾದ ಸಿದ್ಧತೆಯನ್ನೂ ತಾವೇ, ತಮ್ಮದೇ ರೀತಿಯಲ್ಲಿ ಮಾಡಿಕೊಂಡರೆ. ಕೆಲವೊಮ್ಮೆ ನಿರ್ದೇಶಕರು, ಚಿತ್ರತಂಡಗಳು ಹೀಗೇ ರೆಡಿಯಾಗಬೇಕು ಎಂದು ಹೇಳಿರುತ್ತಾರೆ. ಇದರಿಂದ ಹಾಲಿವುಡ್ ನಟ, ನಟಿಯರೂ ಹೊರತಾಗಿಲ್ಲ. ಕೆಲವೊಮ್ಮೆ ಚಿತ್ರತಂಡಗಳು ಸಿದ್ಧತೆ ಮಾಡಿಕೊಳ್ಳಲು ಕೊಡುವ ಐಡಿಯಾಗಳು ಅತಿರೇಕ ಎನ್ನಿಸಬಹುದು.
ಅಂಥದ್ದೇ ಟನೆಗೆ ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟಿ ಆ್ಯನಾ ಹಾಥ್ವೇ ಸಾಯಾಗಿದ್ದರಂತೆ. ಆ ಬಗ್ಗೆ 20 ವರ್ಷಗಳ ಬಳಿಕ ಮೌನ ಮುರಿದಿರುವ ಅವರು, "ಈಗ ಕಾಲ ಬದಲಾಗಿದೆ. ಆದರೆ, 2000ರ ದಶಕದಲ್ಲಿ ನಟ, ನಟಿಯ ಜತೆಗೆ ಕೆಮಿಸ್ಟ್ರಿ ರೂಪಿಸಲು, ಅವರಿಗೆ ವಯಕ್ತಿಕ ಸಮಯ ನೀಡಲಾಗುತ್ತಿತ್ತು. ಅದು ಕೆಟ್ಟದು ಎಂದು ಗೊತ್ತಿದ್ದರೂ, ಆ ಸಮಯದಲ್ಲಿ ಅದೇ ರೀತಿ ಸಿದ್ಧತೆ ನಡೆಯುತ್ತಿತ್ತು. ನನಗೂ ಶೂಟಿಂಗ್ ಸ್ಪಾಟ್ನಲ್ಲಿ ಒಮ್ಮೆ 10 ಜನರಿಗೆ ಮುತ್ತು ನೀಡಲು ತಿಳಿಸಿದ್ದರು. ಇದೆಲ್ಲಾ ಬೇಕಾ? ಅಂತ ನನಗೆ ಬೇಸರವಾಗಿತ್ತು. ಆದರೂ ಪಾತ್ರದ ಸಿದ್ಧತೆಗೆ ಹೀಗೆ ಮಾಡಲೇಬೇಕಾಗಿತ್ತು' ಎಂದು ಹೇಳಿಕೊಂಡಿದ್ದಾರೆ.
ಅಂದಹಾಗೆ, ಮೇ 2ರಂದು ಆ್ಯನಾ ನಟಿಸಿರುವ "ದ ಐಡಿಯಾ ಆಫ್ ಯೂ' ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಅದರಲ್ಲಿ 29 ವರ್ಷದ ನಿಕೊಲಸ್ ಜತೆ 41 ವರ್ಷದ ಆ್ಯನ್ಯಾ ರೊಮ್ಯಾನ್ಸ್ ಮಾಡಲಿದ್ದಾರೆ.