ಆಗಸ್ಟ್​ನಲ್ಲಿ ಬರ್ತಾನೆ 'ಹಿಟ್ಲರ್​' ... ಆಲ್​ ದಿ ಬೆಸ್ಟ್​ ಹೇಳಿದ ಶಿವಣ್ಣ

Hitler - Final
Published on

ಬೆಂಗಳೂರು: ಹೊಸ ಪ್ರತಿಭೆಗಳೇ ಸೇರಿಕೊಂಡು ನಿರ್ಮಿಸಿರುವ ’ಹಿಟ್ಲರ್’ ಚಿತ್ರವು 'ಯು/ಎ' ಪ್ರಮಾಣ ಪತ್ರ ಪಡೆದುಕೊಂಡಿದೆ. ಚಿತ್ರದ ಡೈಲಾಗ್​ ಟ್ರೇಲರ್​ ಈಗಾಗಲೇ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದ್ದು, 50 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಇದು ಕೇವಲ ಸ್ಯಾಂಪಲ್ ಅಷ್ಟೇ. ಪಿಕ್ಚರ್​ ಅಭಿ ಬಾಕಿ ಹೇ ... ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ಚಿತ್ರವು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಇತ್ತೀಚೆಗೆ ಶಿವರಾಜ್‌ಕುಮಾರ್ ’ಹಿಟ್ಲರ್’ ಸಿನಿಮಾದ ತುಣುಕುಗಳನ್ನು ವೀಕ್ಷಿಸಿ, ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿ ತಂಡಕ್ಕೆ ಶುಭಹಾರೈಸಿದ್ದಾರೆ.

ಭೂಗತಲೋಕದಲ್ಲಿ ಅನಾಥ ಹುಡುಗನೊಬ್ಬ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುತ್ತಿರುತ್ತಾನೆ. ಮುಂದೆ ತನ್ನ ದಾರಿ ಸರಿಯಿಲ್ಲವೆಂದು ಅರಿತು, ಅದರಿಂದ ಹೊರ ಬಂದಾಗ ಏನೇನು ಕಷ್ಟಗಳು ಎದುರಾಗುತ್ತವೆ, ಅದನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಈ ಚಿತ್ರದ ಸಾರಾಂಶಂತೆ. 'ಕೆಜಿಎಫ್' ಚಿತ್ರಕ್ಕೆ ಅಮ್ಮನ ಹಾಡು ಬರೆದಿರುವ ಕಿನ್ನಾಳ್‌ರಾಜ್ ಪ್ರಥಮ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಲೋಹಿತ್​, 'ಹಿಟ್ಲರ್​' ಆಗಿ ನಟಿಸಿರುವ ಈ ಚಿತ್ರದಲ್ಲಿ ಸಸ್ಯ, ಮನಮೋಹನ್​ ರೈ, ಬಲರಾಜವಾಡಿ, ವೈಭವ್‌ ನಾಗರಾಜ್, ವಿಜಯ್‌ ಚಂಡೂರ್, ವರ್ಧನ್​ ತೀರ್ಥಹಳ್ಳಿ, ಗಣೇಶ್‌ ರಾವ್ ಮುಂತಾದವರು ನಟಿಸಿದ್ದಾರೆ. ಆಕಾಶ್​ ಪರ್ವ ಸಂಗೀತವಿರುವ ಈ ಚಿತ್ರಕ್ಕೆ ನಾಗರಾಜ್​ ಕಿನ್ನಾಳ ಅವರ ಛಾಯಾಗ್ರಹಣವಿದೆ. ಗಾನಶಿವ ಮೂವೀಸ್ ಬ್ಯಾನರ್​ನಡಿ ಮಮತಾ ಲೋಹಿತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net