ಹಿಂದಿ ಹಾಡುಗಳ ಮಧುರ ಸಂಜೆ; ಆ.6ರಂದು ಎಡಿಎ ರಂಗಮಂದಿರದಲ್ಲಿ..

Music
Published on

ಬೆಂಗಳೂರು: ಬಾಲಿವುಡ್ ಚಿತ್ರಗಳಲ್ಲಿ ಹಾಡುಗಳು ಕಡಿಮೆಯಾಗಿ ಸಿಂಗಲ್​ಗಳು ಹೆಚ್ಚುತ್ತಿವೆ. ಈಗಲೂ ಹಿಂದಿ ಸಿನಿಮಾ ಹಾಡುಗಳು ಎಂದರೆ ಜನ ನೆನಪಿಸಿಕೊಳ್ಳುವುದು 60ರ ದಶಕದ ಹಾಡುಗಳನ್ನು. ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಹೇಮಂತ್ ಕುಮಾರ್ ಮುಂತಾದ ಅಪರೂಪದ ಗಾಯಕರು ಹಾಡಿರುವ ಅಸಂಖ್ಯಾತ ಹಾಡುಗಳು ಇಂದಿಗೂ ಜನಪ್ರಿಯ. ಈ ಹಾಡುಗಳನ್ನು ಇದೀಗ ಲೈವ್ ಕೇಳುವ ಅವಕಾಶ ಬಂದಿದೆ.

ಸುಮಿತ್ ಮುಖರ್ಜಿ ಅವರ ಎಂ.ಎಚ್.ಎಸ್ ಇವೆಂಟ್ಸ್ ಸಂಸ್ಥೆಯು ಮುಂದಿನ ಶನಿವಾರ (ಆಗಸ್ಟ್ 06) ಸಂಜೆ ‘ಯಾ ದಿಲ್ ಕಿ ಸುನೋ’ಎಂಬ ಹಿಂದಿ ಹಳೆಯ ಹಾಡುಗಳ ಕಾರ್ಯಕ್ರಮವೊಂದನ್ನು ಎ.ಡಿ.ಎ ರಂಗಮಂದಿರದಲ್ಲಿ ಆಯೋಜಿಸಿದೆ. ಸಂಜೆ. 5.30ರಿಂದ ಪ್ರಾರಂಭವಾಗುವ ಈ ಸಂಗೀತ ಸಂಜೆಯಲ್ಲಿ ಹಲವು ಸುಮಧುರ ಹಾಡುಗಳನ್ನು ಹಾಡಲಾಗುತ್ತದೆ.

ಜ್ಯೂನಿಯರ್ ಹೇಮಂತ್ ಕುಮಾರ್ ಎಂದೇ ಪ್ರಸಿದ್ಧರಾಗಿರುವ ಕೊಲ್ಕತ್ತಾದ ಸಾಗ್ನಿಕ್ ಸೇನ್, ಜ್ಯೂನಿಯರ್ ಕಿಶೋರ್ ಕುಮಾರ್ ಎಂದು ಜನಪ್ರಿಯರಾಗಿರುವ ಮುಂಬೈನ ಶ್ರೀಜಿತ್ ಜತೆಗೆ ಬೆಂಗಳೂರಿನ ಗಾಯಕರಾದ ಶ್ರುತಿ ರಾಘವೇಂದ್ರನ್, ನಿಯಾಜುದ್ದೀನ್ ನಿಯಾಜ್, ರಾಜಶ್ರೀ ಸಹಾ, ಶೇಖರ್ ಅಯ್ಯರ್ ಮತ್ತು ರಮಾಕಾಂತ ನಾಯಕ್ ಧ್ವನಿಯಾಗಲಿದ್ದಾರೆ. ಪ್ರದೀಪ್ ಪಾಟ್ಕರ್ ಅವರ ಸಂಗೀತಗಾರರ ತಂಡ ಈ ಕಾರ್ಯಕ್ರಮದ ನೇತೃತ್ವ ವಹಿಸಲಿದೆ. ಟಿಕೆಟ್​ಗಳು ಬುಕ್​ವೆುೖಶೋನಲ್ಲಿ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net