ಮುಂಬೈ: ಬಾಲಿವುಡ್ ಗಾಯಕ, ಸಂಗೀತ ನಿರ್ದೇಶಕ, ನಟ ಹಿಮೇಶ್ ರೇಷಮಿಯಾ 1998 ರಿಂದ ಇಂದಿಗೂ ಒಬ್ಬ ದೊಡ್ಡ ಸ್ಟಾರ್ ಎಂದೇ ಹೇಳಬೇಕು. ಅವರ ವಿಭಿನ್ನವಾದ ಕಂಠದ ಮೂಲಕ ಸಂಗೀತ ಪ್ರೀಯರನ್ನು ಸಿಕ್ಕಾಪಟ್ಟೆ ರಂಜಿಸಿ ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇನ್ನು, ಸೋಶಿಯಲ್ ಮೀಡಿಯಾದಲ್ಲಿ ಗಾಯಕ ಹಿಮೇಶ್ ರೇಷಮಿಯಾ ಅವರು ಸಿಕ್ಕಾಪಟ್ಟೆ ಆ್ಯಕ್ಟೀವ್ ಎಂದೇ ಹೇಳಬೇಕು. ಆದರೆ, ಸದಾ ತಮ್ಮ ಹಾಡುಗಳಿಗಾಗಿ, ಸಿನಿಮಾಗಳಿಗಾಗಿ ಸಖತ್ ಸುದ್ದಿಯಲ್ಲಿರುವ ಹಿಮೇಶ್ ಕಳೆದ ಕೆಲವು ಗಂಟೆಗಳಿಂದ ಟ್ರೋಲರ್ಗಳಿಗೆ ಅಚ್ಚುಮೆಚ್ಚು ಆಗಿದ್ದಾರೆ.