ಕೊಲೆಯ ಸುತ್ತ ಹೇ ಕೃಷ್ಣ: ನಿರ್ದೇಶಕಿಗೆ 22 ವರ್ಷ; ಕಥೆಗಾರ್ತಿಗೆ 15 ವರ್ಷ..

Hey Krishna
Published on

ಬೆಂಗಳೂರು: ಕಿರುತೆರೆಯ ಜನಪ್ರಿಯ ನಿರ್ದೇಶಕರಲ್ಲಿ ಬುಕ್ಕಾಪಟ್ನ ವಾಸು ಸಹ ಒಬ್ಬರು. ಈಗ ಅವರ ಮಗಳು ಪೂಜಾ ಭಾರ್ಗವಿ ಸಹ ನಿರ್ದೇಶಕಿಯಾಗುತ್ತಿದ್ದಾರೆ. ‘ಹೇ ಕೃಷ್ಣ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವ 22 ವಯಸ್ಸಿನ ಪೂಜಾ, ಕನ್ನಡದ ಕಿರಿಯ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘ಹೇ ಕೃಷ್ಣ’ ಮುಂದಿನ ತಿಂಗಳಿನಿಂದ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಚಿತ್ರದ ಬಗ್ಗೆ ಹೇಳುವುದಕ್ಕೆ ಮಾಧ್ಯಮದವರ ಎದುರು ತಮ್ಮ ತಂಡದವರೊಂದಿಗೆ ಬಂದಿದ್ದರು ಪೂಜಾ ಭಾರ್ಗವಿ.

‘ಚಿಕ್ಕಂದಿನಿಂದಲೇ ನಿರ್ದೇಶನದ ಬಗ್ಗೆ ಆಸಕ್ತಿ ಇತ್ತು. ನಿರ್ದೇಶನದ ಕೋರ್ಸ್ ಮಾಡಿ ಈಗ ಚಿತ್ರ ನಿರ್ದೇಶನಕ್ಕೆ ಕೈ ಹಾಕುತ್ತಿದ್ದೇನೆ. ಇದೊಂದು ಕೊಲೆಯ ಸುತ್ತ ಸುತ್ತುವ ಚಿತ್ರ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಒಂದು ಕೊಲೆಯ ಸುತ್ತ ನಡೆಯುವ ತನಿಕೆಯ ಕುರಿತು ಚಿತ್ರ ಸಾಗಲಿದೆ. ಚಿತ್ರದಲ್ಲಿ ಇಬ್ಬರು ನಾಯಕರು, ಇಬ್ಬರು ನಾಯಕಿಯರು ಇರಲಿದ್ದಾರೆ. ಕುಂದಾಪುರ, ಮೈಸೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ’ ಎಂದು ಮಾಹಿತಿ ಕೊಟ್ಟರು.

ಈ ಚಿತ್ರವು ಆ ಕೃಷ್ಣ ಪರಮಾತ್ಮನೇ ತಮ್ಮ ಮಗಳಿಗೆ ನೀಡಿದ ಅವಕಾಶ ಎನ್ನುತ್ತಾರೆ ವಾಸು. ‘ಆಕೆ ಚೆನ್ನಾಗಿ ನಿರ್ದೇಶನ ಮಾಡುತ್ತಾಳೆಂಬ ವಿಶ್ವಾಸವಿದೆ. ಈ ಕಥೆ ಬರೆದ ಯುಕ್ತಾ ಸಹ ಚಿಕ್ಕವಳೇ’ ಎಂದರು. ಚಿತ್ರದಲ್ಲಿ ಮಯೂರ್ ಒಬ್ಬ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಶೇಖರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಗಾಯತ್ರಿ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net