ಎಡಗೈಯೇ ಅಪಘಾತಕ್ಕೆ ಕಾರಣ; ವಿಶೇಷ ದಿನದಂದೇ ನಾಯಕಿಯ ಪರಿಚಯ..

Dhanu Harsha
Published on

ಬೆಂಗಳೂರು: 'ಎಡಗೈಯೇ ಅಪಘಾತಕ್ಕೆ ಕಾರಣ..' ಇದು ಕನ್ನಡ ಚಿತ್ರರಂಗದಲ್ಲಿ ಬರಲಿರುವ ನೂತನ ಸಿನಿಮಾದ ಶೀರ್ಷಿಕೆ. ಮತ್ತೊಂದೆಡೆ ಇಂದು ವಿಶ್ವ ಎಡಚರ ದಿನ. ಹೀಗಾಗಿ ಎಡಗೈಯೇ ಕಥೆಯ ಕೇಂದ್ರವಾಗಿರುವ ಈ ಸಿನಿಮಾದ ನಾಯಕಿಯನ್ನು ಚಿತ್ರತಂಡ ಇಂದೇ ಪರಿಚಯ ಮಾಡಿಕೊಟ್ಟಿದೆ.

ದಿಗಂತ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ನೂತನ ನಟಿ ಧನು ಹರ್ಷ ನಾಯಕಿಯಾಗಿ ಅಭಿನಯಿಸುತ್ತಿದ್ದು, ಚಿತ್ರತಂಡ ಇಂದು ಆಕೆಯ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈ ಚಿತ್ರದ ಮೂಲಕ ಧನು ಹರ್ಷ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪ್ರವೇಶ ಮಾಡಿದ್ದು, ಅವರ ಇಂಟ್ರೊಡಕ್ಷನ್ ಟೀಸರ್ ಕೂಡ ಇಂದು ಬಿಡುಗಡೆ ಆಗಿದೆ.

ನಾನು ಈ ಚಿತ್ರದಲ್ಲಿ ರಾಧಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. 'ಎಡಗೈ' ಆಧಾರಿತ ಪರಿಕಲ್ಪನೆ ಸಿನಿಮಾ ಇದಾಗಿದ್ದು, ನನ್ನ ಪಾತ್ರ ಕೂಡ ವಿಶೇಷವಾಗಿದೆ. ನಾನು ಡಿಫರೆಂಟ್ ಶೇಡ್​ನಲ್ಲಿ ಕಾಣಿಸಿಕೊಳ್ಳಲಿರುವುದಾಗಿ ಧನು ಹೇಳಿದ್ದಾರೆ.

ಸಮರ್ಥ್ ಬಿ. ಕಡ್ಕೋಲ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಆಗಸ್ಟ್ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ. ನಿರ್ದೇಶಕ ಗುರುದತ್ತ ಗಾಣಿಗ ಮತ್ತು ಸಮರ್ಥ ಕಡ್ಕೋಳ್ ಜಂಟಿಯಾಗಿ ನಿರ್ಮಿಸಿರುವ ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣವಿದೆ. ಈ ಹಿಂದೆ ದಿಗಂತ್ ಫಸ್ಟ್​​ಲುಕ್​ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ನಾಯಕಿ ಇಂಟ್ರೊಡಕ್ಷನ್​ ಟೀಸರ್ ಕೂಡ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net