

Multiflex : ಇಂದು ದಾಖಲೆಯ 16ನೇ ಬಜೆಟ್ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕಾಬಿಟ್ಟಿ ಹಣ ವಸೂಲಿ ಮಾಡುವ ಮಲ್ಟಿಫ್ಲೆಕ್ಸ್ಗಳಿಗೆ ಬ್ರೇಕ್ ಹಾಕಿದ್ದಾರೆ. ಏಕರೂಪ ದರದ ನೀತಿಯನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ.
ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಫ್ಲೆಕ್ಸ್ಗಳಲ್ಲಿ ಟಿಕೆಟ್ ದರಗಳಲ್ಲಿ ಭಾರಿ ವ್ಯತ್ಯಾಸವಿದೆ. ಚಿತ್ರಮಂದಿರಗಳಿಗೆ ಹೋಲಿಸಿದರೆ ಮಲ್ಟಿಫ್ಲೆಕ್ಸ್ಗಳಲ್ಲಿ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಾರೆ. ಅಲ್ಲದೆ, ಪಾಪ್ಕಾರ್ನ್ಗೂ ಕೂಡ ಮೂರು ಪಟ್ಟು ಹಣವನ್ನು ವಸೂಲಿ ಮಾಡುತ್ತಾರೆ. ಇದೀಗ ಬಜೆಟ್ನಲ್ಲಿ ಏಕರೂಪ ದರ ನಿಗದಿ ಘೋಷಣೆಯಾಗಲಿದ್ದು, ಚಿತ್ರಮಂದಿರಗಳಲ್ಲಿರುವ ಬೆಲೆಯೇ ಮಲ್ಟಿಫ್ಲೆಕ್ಸ್ಗಳಲ್ಲಿ ಇರಲಿದೆ. ಇದರಿಂದ ಹಣದ ಲೂಟಿಗೆ ಕಡಿವಾಣ ಬೀಳಲಿದೆ.
ಪರಭಾಷೆಯ ಸಿನಿಮಾಗಳು ಬಂದರೆ ಮಲ್ಟಿಪ್ಲೆಕ್ಸ್ಗಳು ಜನರಿಂದ ದೊಡ್ಡ ಮೊತ್ತದ ಹಣವನ್ನು ಲೂಟಿ ಮಾಡುತ್ತಾರೆ. ಬಜೆಟ್ ಮಂಡನೆಗೂ ಮುನ್ನ ನಡೆದ ಪರಿಷತ್ ಕಲಾಪದಲ್ಲೂ ಸಹ ಏಕರೂಪ ದರದ ಬಗ್ಗೆ ಎಂಎಲ್ಸಿ ಗೋವಿಂದ ರಾಜು ಪ್ರಸ್ತಾಪ ಮಾಡಿದ್ದರು. ಕನ್ನಡ ಭಾಷೆಗೆ ಒಂದು ದರವಾದರೆ, ಪರಭಾಷೆ ಸಿನಿಮಾಗಳಿಗೆ ಇನ್ನೊಂದು ದರ ನಿಗದಿ ಮಾಡುತ್ತಾರೆ ಎಂದು ಹೇಳಿದ್ದರು. ಈ ಬಗ್ಗೆ ಗಮನ ಹರಿಸುವುದಾಗಿ ಸರ್ಕಾರ ಹೇಳಿತ್ತು.
ಇದೀಗ ಬಜೆಟ್ನಲ್ಲಿ ಏಕರೂಪ ದರ ನಿಗದಿ ಘೋಷಣೆಯಾಗಿದೆ. 200ರೂ. ದರ ನಿಗದಿ ಮಾಡಿ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ.
ಇನ್ನು ಸಿನಿಮಾ ಕ್ಷೇತ್ರವನ್ನ ಸಿನಿಮಾ ಉದ್ಯಮ ಎಂದು ಪರಿಗಣಿಸಿ ಕೈಗಾರಿಕಾ ನೀತಿಯಡಿ ತರಲು ಸರ್ಕಾರ ನಿರ್ಧಾರ ಮಾಡಿದೆ. ಕನ್ನಡ ಸಿನಿಮಾಗಳಿಗಾಗಿಯೇ ಪ್ರತ್ಯೇಕ ಒಟಿಟಿ ವೇದಿಕೆ ಸೃಷ್ಟಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.