ಆಕೆ ಬೇಕಿದ್ರೆ... ಬಯೋಪಿಕ್​ ಚಿತ್ರಕ್ಕೆ ದೀಪಿಕಾ ಓಕೆ ಪ್ರಶ್ನೆಗೆ ಹಿರಿಯ ನಟಿ ಹೇಮಾ ಮಾಲಿನಿ ಓಪನ್ ಟಾಕ್​

ಬಹುಭಾಷಾ ತಾರೆ ಹೇಮಾ ಮಾಲಿನಿ
ಬಹುಭಾಷಾ ತಾರೆ ಹೇಮಾ ಮಾಲಿನಿ
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಚಿತ್ರೋದ್ಯಮದಲ್ಲಿ 60 ವರ್ಷ ಪೂರೈಸಿದ ಹಿರಿಯ ನಟಿ ಹೇಮಾ ಮಾಲಿನಿ
  • ನಿಮ್ಮ ಬಯೋಪಿಕ್​ ಚಿತ್ರವನ್ನು ನಟಿ ದೀಪಿಕಾ ಪಡುಕೋಣೆ ಮಾಡಿದ್ರೆ ಓಕೆ ನಾ?
  • ಈ ಪ್ರಶ್ನೆಗೆ ಹೇಮಾ ಮಾಲಿನಿ ಕೊಟ್ಟ ಉತ್ತರ ಹೀಗಿದೆ
ಮುಂಬೈ: ಭಾರತೀಯ ಚಿತ್ರೋದ್ಯಮದಲ್ಲಿ 60 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿ ಹಲವು ವಿಷಯಗಳನ್ನು ಮುಕ್ತವಾಗಿ ಮಾತನಾಡಿರುವ ಬಾಲಿವುಡ್​ ಹಿರಿಯ ನಟಿ ಹೇಮಾ ಮಾಲಿನಿ, ತಮ್ಮ ಬಯೋಪಿಕ್​ ಚಿತ್ರವನ್ನು ದೀಪಿಕಾ ಪಡುಕೋಣೆ ಮಾಡಿದರೆ ನಿಮಗೆ ಓಕೆ ನಾ? ಎಂಬ ಪ್ರಶ್ನೆಗೆ ಕೊಟ್ಟ ಉತ್ತರ ಹಲವರ ಗಮನ ಸೆಳೆದಿದೆ.
ಮೊದಲನೇಯದಾಗಿ 60 ವರ್ಷ ಹೇಗೆ ಹೋಯಿತು ಎಂಬುದೇ ಗೊತ್ತಿಲ್ಲ. ಜನರು ಮತ್ತು ಪೋಷಕರ ಆಶೀರ್ವಾದ, ಪ್ರೀತಿಯೇ ಇಷ್ಟಕ್ಕೆಲ್ಲ ಕಾರಣ. ಸಿನಿಮಾ ನಿರ್ಮಾಪಕರು, ಸಹನಟರು, ಟೆಕ್ನಿಷಿಯನ್​ಗಳು ಮತ್ತು ನನ್ನ ಕುಟುಂಬ ಸದಸ್ಯರ ನಿರಂತರ ಬೆಂಬಲಕ್ಕೆ ಸದಾ ಚಿರಋಣಿ ಎಂದರು.
'ಶೋಲೆ', 'ಸೀತಾ ಔರ್ ಗೀತಾ', 'ಸಟ್ಟೆ ಪೆ ಸತ್ತಾ', 'ಖುಷ್ಬೂ', 'ನಸೀಬ್' ಮತ್ತು 'ಬಾಗ್ಬನ್' ಸೇರಿದಂತೆ ಮುಂತಾದ ಬ್ಲಾಕ್​ಬಸ್ಟರ್​ ಚಿತ್ರಗಳಿಂದ ಅಪಾರ ಸಂಖ್ಯೆಯ ಸಿನಿಪ್ರಿಯರ ಹೃದಯಗೆದ್ದ ತಾರೆ ಹೇಮಾ ಮಾಲಿನಿ, "ನನ್ನ ತಾಯಿಗೆ ನಾನು ಸದಾ ಕೃತಜ್ಞಳು. ಮಕ್ಕಳ ಜೀವನ ಮತ್ತು ವೃತ್ತಿಜೀವನದಲ್ಲಿ ತಾಯಂದಿರು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರತಿ ಹಂತದಲ್ಲೂ ಕುಟುಂಬವು ನನ್ನ ಹೆಗಲಿಗಿತ್ತು. ಹೀಗಾಗಿಯೇ ಈ ಮಟ್ಟಿಗಿನ ಸಾಧನೆ ಮಾಡಲು ಸಾಧ್ಯವಾಯಿತು" ಎಂದು ಹೇಳಿದರು.
"ಸಾಕಷ್ಟು ನಟಿಮಣಿಯರಿಗೆ ಜನ್ಮ ನೀಡಿದ ಈ ಸುಂದರ ಚಿತ್ರೋದ್ಯಮದ ಭಾಗಿಯಾಗಿರಲು ನನಗೆ ತುಂಬಾ ಸಂತಸ ಮತ್ತು ಹೆಮ್ಮೆ ಇದೆ. ನಾನು ಉದ್ಯಮದಲ್ಲಿ ಕಳೆದ ಕೆಲವು ದಶಕಗಳಲ್ಲಿ, ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದೇನೆ ಮತ್ತು ಹಲವಾರು ಸ್ಮರಣೀಯ ಹಾಡುಗಳಲ್ಲಿ ಹೆಜ್ಜೆ ಹಾಕಿದ್ದೀನಿ. ಹಲವಾರು ನಿರ್ದೇಶಕರು ಮತ್ತು ನಟರೊಂದಿಗೆ ಕೆಲಸ ಮಾಡಿರುವ ಖುಷಿಯೂ ನನಗಿದೆ" ಎಂದರು.

ನಿಮ್ಮ ಬಯೋಪಿಕ್​ಗೆ ದೀಪಿಕಾ ಪಡುಕೋಣೆ?

ನಿಮ್ಮ ಬಯೋಪಿಕ್​ ಸಿನಿಮಾವನ್ನು ದೀಪಿಕಾ ಪಡುಕೋಣೆ ಮಾಡಿದರೆ ಓಕೆ ನಾ ಎಂಬ ಪ್ರಶ್ನೆಗೆ ಉತ್ತರಿಸಿದ ಹಿರಿಯ ನಟಿ, "ಆಕೆ ಬಯಸಿದರೆ, ಖಂಡಿತ ಮಾಡಲಿ. ಅದನ್ನು ಅವರೊಬ್ಬರೆ ಅಂತಲ್ಲ, ಯಾರಾದರೂ ಮಾಡಬಹುದು. ದೀಪಿಕಾ ಒಬ್ಬ ಸುಂದರ, ಪ್ರತಿಭಾನ್ವಿತ ಹುಡುಗಿ ಎಂದು ಮುಕ್ತವಾಗಿ ಮಾತನಾಡಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net