

ಚೆನ್ನೈ: ತಮಿಳಿನ ಕಾದಲ್ ಸಿನಿಮಾ ಮೂಲಕ ಸಖತ್ ಹೆಸರು ಮಾಡಿದ ನಟಿ ಸಂಧ್ಯಾ ( Sandhya ), ಕನ್ನಡಿಗರಿಗೂ ಪರಿಚಿತರು. ದಿವಂಗತ ನಟ ಡಾ. ವಿಷ್ಣುವರ್ಧನ್ ಅಭಿನಯದ ಕೊನೆಯ ಸಿನಿಮಾ ಆಪ್ತರಕ್ಷಕ ಸಿನಿಮಾದಲ್ಲಿ ನಾಗವಲ್ಲಿ ಪಾತ್ರದಲ್ಲಿ ನಟಿಸುವ ಮೂಲಕ ಸಂಧ್ಯಾ ಎಲ್ಲರನ್ನು ಭಯಬೀಳಿಸಿದ್ದರು. ಆಪ್ತರಕ್ಷಕ ಮಾತ್ರವಲ್ಲದೆ, ಶಿವರಾಜ್ಕುಮಾರ್ ಅಭಿನಯದ ನಂದಾ ಸಿನಿಮಾದಲ್ಲೂ ಸಂಧ್ಯಾ ನಟನೆ ಮಾಡಿದ್ದಾರೆ.
ನಟಿಸಿದ್ದು ಎರಡೇ ಸಿನಿಮಾವಾದರೂ ಆಪ್ತರಕ್ಷಕ ಸಿನಿಮಾದಲ್ಲಿ ತಮ್ಮ ನಟನೆಯಿಂದಾಗಿ ಸಂಧ್ಯಾ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದಿದ್ದಾರೆ. ಸಂಧ್ಯಾ ತಮಿಳು ಚಿತ್ರರಂಗದ ಪ್ರಮುಖ ನಟಿ. ಅವರು ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಧ್ಯಾ ಆನಂತರ ಸಿನಿಮಾದಿಂದ ದೂರಾದರು.
ಸದ್ಯ ಸಂಧ್ಯಾ ಅವರು ವೈವಾಹಿಕ ಜೀವನದತ್ತ ಗಮನಹರಿಸಿದ್ದಾರೆ. ಇದರ ನಡುವೆ ಸಂಧ್ಯಾ ಅವರ ಮಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದುವರೆಗೂ ಒಮ್ಮೆಯೂ ತಮ್ಮ ಕುಟುಂಬದ ಮಾಹಿತಿಯನ್ನು ಸಂಧ್ಯಾ ಬಹಿರಂಗಪಡಿಸಿಲ್ಲ. ಕುಟುಂಬದ ವಿಚಾರದಲ್ಲಿ ಗೌಪತ್ಯೆ ಕಾಪಾಡಿಕೊಳ್ಳುತ್ತಿದ್ದರು. ಇದೇ ಮೊದಲ ಬಾರಿಗೆ ಮಗಳ ಫೋಟೋ ಜಾಲತಾಣದಲ್ಲಿ ಕಾಣಿಕೊಂಡಿದೆ. ಸಂಧ್ಯಾ ಮಗಳನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಸಂಧ್ಯಾಗೆ ಇಷ್ಟು ದೊಡ್ಡ ಮಗಳಿದ್ದಾಳಾ ಎಂದು ಹುಬ್ಬೇರಿಸಿದ್ದಾರೆ. ಅಲ್ಲದೆ, ಸಂಧ್ಯಾ ಅವರು ಕೂಡ ತುಂಬಾ ಬದಲಾಗಿದೆ ಎನ್ನುತ್ತಿದ್ದಾರೆ.
ಅಂದಹಾಗೆ ಸಂಧ್ಯಾ ಅವರ ನಿಜವಾದ ಹೆಸರು ರೇವತಿ. ಕಾದಲ್ ಆಕೆಯ ಮೊದಲ ತಮಿಳು ಚಿತ್ರ. ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದ ಸಂಧ್ಯಾ, ನಾಯಕಿಯಾಗಿ ತಮ್ಮ ಬೋಲ್ಡ್ ಲುಕ್ನಿಂದ ತಮ್ಮದೇಯಾದ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದಾರೆ.
ಸಂಧ್ಯಾ ಅವರು 2015 ರಲ್ಲಿ ಚೆನ್ನೈ ಮೂಲದ ಉದ್ಯಮಿ ವೆಂಕಟ್ ಚಂದ್ರಶೇಖರ್ ಅವರನ್ನು ವಿವಾಹವಾದರು. ಅವರಿಗೆ 2016 ರಲ್ಲಿ ಹೆಣ್ಣು ಮಗುವಾಯಿತು. ಸದ್ಯ ಸಂಧ್ಯಾ ಅವರು ತಮ್ಮ ಮಗಳಿನೊಂದಿಗೆ ಇರುವ ಫೋಟೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)